ಮಧುಮೇಹ ಇರುವವರು ಏನು ತಿನ್ನಬೇಕು, ಏನು ತಪ್ಪಿಸಬೇಕು ಎಂಬ ಗೊಂದಲ ಯಾವಾಗಲೂ ಇರುತ್ತದೆ. ವಿಶೇಷವಾಗಿ ಸಿಹಿಯಾದ ರುಚಿ ಇರುವ ಸಿಹಿಗೆಣಸು ಬಗ್ಗೆ ಹಲವರಲ್ಲಿ ಭಯ. ಆದರೆ ಸಿಹಿಯಾದರೂ, ಇದು ನಿಜವಾಗಿ ಮಧುಮೇಹಿಗಳಿಗೆ ಸಂಪೂರ್ಣ ನಿಷೇಧವೇ? ಈ ಪ್ರಶ್ನೆಗೆ ಉತ್ತರ ಇಲ್ಲದೆ ಓದಿ.
- ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್: ಸಿಹಿಗೆಣಸಿನ ಗ್ಲೈಸೆಮಿಕ್ ಇಂಡೆಕ್ಸ್ (GI) ಕಡಿಮೆಯಿರುವುದರಿಂದ ರಕ್ತದಲ್ಲಿ ಸಕ್ಕರೆಯ ಏರಿಕೆ ನಿಧಾನವಾಗಿವಾಗುತ್ತದೆ. ಇದು ಮಧುಮೇಹಿಗಳಿಗಾಗಿ ಅನುಕೂಲಕರ.
- ಫೈಬರ್ ಜಾಸ್ತಿ: ಸಿಹಿಗೆಣಸಿನಲ್ಲಿ ಇರುವ ಹೆಚ್ಚಿನ ಫೈಬರ್ ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಪೋಷಕಾಂಶಗಳಲ್ಲಿ ಸಮೃದ್ಧ: ವಿಟಮಿನ್ A, C, ಪೊಟಾಷಿಯಂ ಮತ್ತು ಆಂಟಿ ಆಕ್ಸಿಡೆಂಟ್‌ಗಳಿಂದ ತುಂಬಿರುವ ಸಿಹಿಗೆಣಸು ದೇಹಕ್ಕೆ ಒಳ್ಳೆಯ ಪೌಷ್ಟಿಕ ಬೆಂಬಲ ನೀಡುತ್ತದೆ.
- ಬೇಯಿಸಿದ ರೂಪ ಹೆಚ್ಚು ಉತ್ತಮ: ಎಣ್ಣೆಯಲ್ಲಿ ಹುರಿದ ಸಿಹಿಗೆಣಸು ಮಧುಮೇಹಿಗಳಿಗೆ ಸೂಕ್ತವಲ್ಲ. ಬದಲಿಗೆ ಬೇಯಿಸಿ ಅಥವಾ ಬೆಂಕಿಯಲ್ಲಿ ಸುಟ್ಟ ಸಿಹಿಗೆಣಸು ಸೇವಿಸಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಸ್ಥಿರವಾಗಿರುತ್ತದೆ.
- ಮಿತ ಪ್ರಮಾಣವೇ ಮುಖ್ಯ: ಸಿಹಿಗೆಣಸು ಒಳ್ಳೆಯದಾದರೂ ಮಿತ ಪ್ರಮಾಣದಲ್ಲಿ ತಿನ್ನುವುದು ಅತೀ ಅಗತ್ಯ. ದಿನಕ್ಕೆ ಸಣ್ಣ ಪ್ರಮಾಣದ ಒಂದು ಸರ್ವಿಂಗ್ ಸಾಕು.
- ಒಟ್ಟಾರೆ, ಮಧುಮೇಹ ಇರುವವರು ಸಿಹಿಗೆಣಸು ತಿನ್ನಬಹುದು. ಆದರೆ ಸರಿಯಾದ ವಿಧಾನದಲ್ಲಿ ಮತ್ತು ಮಿತ ಪ್ರಮಾಣದಲ್ಲಿ ಮಾತ್ರ. ಆರೋಗ್ಯಕರ ಜೀವನಶೈಲಿಯೊಂದಿಗೆ ಇದನ್ನು ಸೇರಿದಾಗ ಉತ್ತಮ ಪ್ರಯೋಜನ ಸಿಗುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

