ಗಾಜಾ ಮೇಲೆ ದಿಢೀರ್ ವೈಮಾನಿಕ ದಾಳಿ: ಮಕ್ಕಳ‌ ಸಹಿತ 24 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗಾಜಾದ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಆರು ಮಕ್ಕಳ ಸಹಿತ 24 ಮಂದಿ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಉಗ್ರರನ್ನು ಗುರಿಯಾಗಿಸಿ ಇಸ್ರೇಲ್, ಗಾಜಾ ಹಾಗೂ ಪ್ಯಾಲೇಸ್ಟಿನ್ ಮೇಲೆ ಶುಕ್ರವಾರದಿಂದಲೇ ವೈಮಾನಿಕ ದಾಳಿ ಅರಂಭಿಸಿದೆ.
ಇಂದಿನ ದಾಳಿಯಲ್ಲಿ ಗಾಜಾ ಕಮಾಂಡರ್‌ ತೈಸೀರ್ ಅಲ್ ಜಬಾರಿ ಸಾವನ್ನಪ್ಪಿರುವುದಾಗಿ ಗಾಜಾದ ಸರ್ಕಾರಿ ಮೂಲಗಳು ವರದಿ‌ಮಾಡಿವೆ.

ಆಗಸ್ಟ್‌ 5ರಂದು ಇಸ್ರೇಲ್ ಸೇನೆ ಗಾಜಾ ಪಟ್ಟಿಗೆ ಗುಂಡು ಹಾರಿಸಿದ ಬಳಿಕ ಇಲ್ಲಿ ಸಂಘರ್ಷ ಆರಂಭಗೊಂಡಿದೆ. ಇಸ್ರೇಲ್‌ ದಾಳಿಗೆ ಪ್ರತಿಯಾಗಿ ಗಾಜಾ ಪ್ಯಾಲೇಸ್ಟಿನ್‌ ಮೇಲೆ ಬಾಂಬ್ ದಾಳಿ ನಡೆಸಿತ್ತು. ಈ ಬೆನ್ನಿಗೇ ಗಾಜಾ ನಗರದ ವಸತಿ ಪ್ರದೇಶದಲ್ಲಿ ವಾಸವಾಗಿರುವ ಇಸ್ಲಾಮಿಕ್‌ ಜಿಹಾದ್‌ ಸದಸ್ಯನ ನಿವಾಸದ ಮೇಲೆ ಇಸ್ರೇಲ್‌ ಯುದ್ದ ವಿಮಾನಗಳು ವೈಮಾನಿಕ ದಾಳಿ ನಡೆಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here