ಹೊಸದಿಗಂತ ವರದಿ ವಿಜಯಪುರ:
ಕೌಟುಂಬಿಕ ಕಲಹದಿಂದ ಬೇಸತ್ತ ಯುವಕನೊಬ್ಬ ಆಲಮಟ್ಟಿ ಸೇತುವೆ ಮೇಲಿಂದ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ನಡೆದಿದೆ.
ನಿಡಗುಂದಿ ತಾಲೂಕಿನ ಸೀತಿಮನಿ ತಾಂಡಾ ನಿವಾಸಿ ಸುನೀಲ ಚವ್ಹಾಣ (25) ಆತ್ಮಹತ್ಯೆ ಮಾಡಿಕೊಂಡ ಯುವಕ ಸುನೀಲ ಚವ್ಹಾಣ ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ನದಿಗೆ ಹಾರಿದ್ದ ಯುವಕನ ಶವ ಸ್ಥಳೀಯರು ಹೊರಕ್ಕೆ ತೆಗೆದಿದ್ದಾರೆ. ಆಲಮಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ