ಹೊಸದಿಗಂತ ವರದಿ ಗದಗ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಯಸ್ಸಿನ ಬಗ್ಗೆ ಅವರೇ ಸ್ಪಷ್ಟಿಕರಣ ನೀಡಿರುವದರಿಂದ ಮೊಸರಿನಲ್ಲಿ ಕಲ್ಲು ಹುಡುಕುವುದನ್ನು ಬಿಡಬೇಕು ಎಂದು ಶಾಸಕ ಡಾ. ಎಚ್.ಕೆ.ಪಾಟೀಲ ಅವರು ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರಿಗೆ 75 ವಯಸ್ಸು ಆಗಿದೆ ಎಂದು ಹೇಳಿದ್ದರಿಂದ ಎಲ್ಲರೂ ಕೂಡಿಕೊಂಡು ಸಿದ್ದರಾಮೋತ್ಸವನ್ನು ಮಾಡಿದ್ದೆವೆ. ವೀಕಿಪೀಡಿಯಾ ಸಿದ್ದರಾಮಯ್ಯನವರ ಆಪಿಶಿಯಲ್ ವೆಬ್‌ಸೈಟ್ ಅಲ್ಲ, ಅವರ ಟೀಚರ್ ಬರೆದ ದಾಖಲೆ ಪ್ರಕಾರ ಸಿದ್ದರಾಮಯ್ಯ ಅವರಿಗೆ 75 ವರ್ಷವಾಗಿದೆ. 73 ರಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸಿದ್ದರಾಮೋತ್ಸವ ಮಾಡಿದ್ದಾರೆ ಇನ್ನೂ 75ರಲ್ಲಿ ಹೇಗೆ ಮಾಡಬಹುದು ಎಂದು ಬಿಜೆಪಿಯವರಿಗೆ ಭಯ ಕಾಡುತ್ತಿದೆ ಎಂದು ಶಾಸಕ ಡಾ. ಎಚ್.ಕೆ.ಪಾಟೀಲ ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರುಗಳಾದ ವಾಸಣ್ಣ ಕುರಡಗಿ, ಸಿದ್ದಲಿಂಗೇಶ್ವರ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ಅಶೋಕ ಮಂದಾಲಿ, ಪರಮೇಶ್ವರ ಜಂತ್ಲಿ ಸೇರಿದಂತೆ ಮುಂತಾದವರು ಇದ್ದರು