ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾಗೆ ಗಿಲ್ ಶನಿವಾರ ಶಾಕ್ ನೀಡಿದ್ದಾರೆ. ಯುವ ನಾಯಕ ಶುಭಮನ್ ಗಿಲ್ ಮೈದಾನದಲ್ಲೇ ತೀವ್ರ ಕುತ್ತಿಗೆ ನೋವಿನಿಂದ ಬಳಲಿದ್ದು, ಅವರನ್ನು ತಕ್ಷಣವೇ ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈಗ ಗಿಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನವೆಂಬರ್ 22ರಿಂದ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯ ಆಡುವುದು ಅನುಮಾನವಾಗಿಯೇ ಉಳಿದೆ.
ಸೈಮನ್ ಹರ್ಮರ್ ಅವರ ಎಸೆತವನ್ನು ಬೌಂಡರಿಗಟ್ಟುವ ವೇಳೆ ಗಿಲ್ ಅವರ ಕುತ್ತಿಗೆಯಲ್ಲಿ ಏಕಾಏಕಿ ನೋವು ಕಾಣಿಸಿಕೊಂಡಿತು. ಕೇವಲ ನಾಲ್ಕು ರನ್ ಮಾಡಿದ ಗಿಲ್ ವೈದ್ಯರ ಸಹಾಯದಿಂದ ಮೈದಾನ ಬಿಟ್ಟು ಹೊರಟರು.
ಭಾರತ ಈಗ ಮೊದಲ ಟೆಸ್ಟ್‌ನಲ್ಲಿ ಪೈಪೋಟಿ ಮುನ್ನಡೆ ಹಿಡಿದಿದ್ದರೂ, ನಾಯಕ ಗಿಲ್ ಗಾಯದಿಂದ ತಂಡಕ್ಕೆ ಚಿಂತೆ ಹೆಚ್ಚಾಗಿದೆ. ಮೂಲಗಳ ಪ್ರಕಾರ, ಗಿಲ್ ಫಿಟ್ ಆಗಲು ಕೆಲವು ದಿನಗಳು ಬೇಕಾಗಬಹುದು. ಹೀಗಾಗಿ ಗುವಾಹಟಿಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆ ಕಡಿಮೆ. ಗಿಲ್ ಮೈದಾನ ತೊರೆದ ನಂತರ ಉಪನಾಯಕ ರಿಷಭ್ ಪಂತ್ ತಂಡವನ್ನು ಮುನ್ನಡೆಸಿದ್ದು, ಮುಂದಿನ ಪಂದ್ಯದಲ್ಲಿ ನಾಯಕತ್ವ ವಹಿಸುವ ಸಾಧ್ಯತೆ ಇದೆ.

