ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಭರ್ಜರಿ ಗೆಲುವು ರಾಷ್ಟ್ರವ್ಯಾಪಿ ರಾಜಕೀಯ ಚರ್ಚೆಗೆ ಕಾರಣವಾಗಿರುವ ನಡುವೆ, ತಮಿಳುನಾಡಿನ ರಾಜಕೀಯ ವಲಯದಲ್ಲಿ ಕಮಲ್ ಹಾಸನ್ ಅವರ ಎಚ್ಚರಿಕೆ ಹೊಸ ಕುತೂಹಲ ಹುಟ್ಟುಹಾಕಿದೆ.
ಬಿಹಾರದ ಫಲಿತಾಂಶ ಹೊರಬಿದ್ದ ಕೆಲವೇ ಗಂಟೆಗಳಲ್ಲೇ, ಮಕ್ಕಳ್ ನೀಧಿ ಮಯ್ಯಮ್ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರು ಪತ್ರಿಕಾ ಪ್ರತಿಕ್ರಿಯೆಯಲ್ಲಿ “ನಾವು ಜಾಗರೂಕರಾಗಿರಬೇಕು. ತಮಿಳುನಾಡು ಜಾಗರೂಕರಾಗಿರಬೇಕು… ನಾನು ಹೇಳಬಲ್ಲೆ ಅಷ್ಟೆ” ಎಂದು ಚುಟುಕಾಗಿ ಮಾತನಾಡಿದ್ದಾರೆ. ಅವರ ಈ ಹೇಳಿಕೆ ನೇರವಾಗಿ ಯಾರನ್ನು ಉದ್ದೇಶಿಸಿದೆ ಎಂದು ಸ್ಪಷ್ಟಪಡಿಸದಿದ್ದರೂ, ರಾಜ್ಯದ ಮುಂದಿನ ರಾಜಕೀಯ ಸಮೀಕರಣಗಳ ಬಗ್ಗೆ ಆತಂಕದ ಸೂಚನೆಯಂತೆ ಕಾಣುತ್ತಿದೆ.
ಇದನ್ನು ತಮಿಳುನಾಡಿನ 2026ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲೇ ವಿಶ್ಲೇಷಿಸಲಾಗುತ್ತಿದೆ. ರಾಜ್ಯದ ಜನರಿಗೆ ಕಮಲ್ ಹಾಸನ್ ನೀಡಿದ ಸಂದೇಶವು ಬಿಹಾರದ ಫಲಿತಾಂಶವು ದಕ್ಷಿಣ ಭಾರತದ ರಾಜಕೀಯಕ್ಕೂ ಪರಿಣಾಮ ಬೀರುವ ಸಾಧ್ಯತೆಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ.

