Monday, November 17, 2025

ರಿವರ್ಸ್ ತೆಗೆಯುವಾಗ ಕಾರು ಹರಿದು ಒಂದೂವರೆ ವರ್ಷದ ಮಗು ಸಾವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೋಟದ ಗುಡ್ಡದಹಳ್ಳಿ ಬೆನಕ ಲೇಔಟ್‌ನಲ್ಲಿ ಕಾರು ರಿವರ್ಸ್ ತೆಗೆದ ಸಂದರ್ಭದಲ್ಲಿ ಒಂದೂವರೆ ವರ್ಷದ ನೂತನ್ ಎಂಬ ಮಗು ಚಕ್ರದಡಿಗೆ ಸಿಲುಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ.

ಮಗು ನೂತನನ ತಂದೆ-ತಾಯಿ ಮೋಹನ್ ಮತ್ತು ಪತ್ನಿ ಮನೆಯಲ್ಲಿ ಇದ್ದ ವೇಳೆ, ಮೋಹನ್ ಅವರ ಅಕ್ಕ ದೇವಿಕಾ ಹಾಗೂ ಭಾವ ಮುನೇಶ್ ಭೇಟಿ ನೀಡಿದ್ದರು. ಮನೆಯಿಂದ ಹೊರಡುವ ಸಲುವಾಗಿ ಕಾರನ್ನು ರಿವರ್ಸ್ ತೆಗೆದಾಗ, ರಸ್ತೆಯ ಪಕ್ಕದಲ್ಲಿ ಆಟವಾಡುತ್ತಿದ್ದ ಮಗುವನ್ನು ಗಮನಿಸದೇ ವಾಹನ ಹಿಮ್ಮುಖವಾಗಿ ಚಲಿಸಿ ದುರಂತ ಸಂಭವಿಸಿದೆ.

ಘಟನೆ ನಂತರ ಸ್ಥಳಕ್ಕೆ ಭೇಟಿ ನೀಡಿದ ಮಾದನಾಯಕನಹಳ್ಳಿ ಪೊಲೀಸರು, ಅಜಾಗರೂಕತೆಯಿಂದ ಸಾವಿಗೆ ಕಾರಣವಾದ ಪ್ರಕರಣವಾಗಿ ಬಿಎನ್‌ಎಸ್ 106ರಡಿ FIR ದಾಖಲಿಸಿದ್ದು, ಘಟನೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

error: Content is protected !!