ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ಚುನಾವಣೆಯಲ್ಲಿ ಆರ್‌ಜೆಡಿ ಸೋಲಿಗೆ ಸಹೋದರಿ ರೋಹಿಣಿಯನ್ನು ನಿಂದಿಸಿ, ಆಕೆ ಕಡೆಗೆ ಚಪ್ಪಲಿ ಎಸೆದು ತೇಜಸ್ವಿ ಯಾದವ್ ಆಕ್ರೋಶ ಹೊರಹಾಕಿದ್ದರೆಂದು ಮೂಲಗಳು ತಿಳಿಸಿವೆ.
ಚುನಾವಣೆಯಲ್ಲಿ ಆರ್‌ಜೆಡಿ ಹೀನಾಯ ಸೋಲಿನ ವಿಚಾರವಾಗಿ ಶನಿವಾರ ಮಧ್ಯಾಹ್ನ ಕುಟುಂಬದಲ್ಲಿ ವಾಗ್ದಾವ ನಡೆದಿದೆ. ವಿರೋಧ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಯಾದವ್, ಪಕ್ಷದ ಸೋಲಿಗೆ ಸಹೋದರಿ ಆಚಾರ್ಯ ಅವರನ್ನೇ ದೂಷಿಸಿದ್ದಾರೆ.
ನಿನ್ನಿಂದಾಗಿ ನಾವು ಚುನಾವಣೆಯಲ್ಲಿ ಸೋತಿದ್ದೇವೆ. ನಿನ್ನಿಂದಾಗಿ ನಾವು ಶಾಪಗ್ರಸ್ತರಾಗಿದ್ದೇವೆ ಎಂದು ಯಾದವ್ ತನ್ನ ಸಹೋದರಿಗೆ ಬೈದಿದ್ದಾರೆ ಎನ್ನಲಾಗಿದೆ. ನಂತರ ಕೋಪದಿಂದ ಆಕೆಯ ಮೇಲೆ ಚಪ್ಪಲಿ ಎಸೆದು ನಿಂದಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಚುನಾವಣೆ ಸೋಲಿನ ಬೆನ್ನಲ್ಲೇ ರೋಹಿಣಿ ಅವರು ರಾಜಕೀಯ ಹಾಗೂ ತಮ್ಮ ಕುಟುಂಬದಿಂದ ದೂರಾಗುವುದಾಗಿ ತಿಳಿಸಿದ್ದರು. ವಿಧಾನಸಭಾ ಚುನಾವಣೆ ಸೋಲಿಗೆ ತನ್ನನ್ನೇ ಹೊಣೆಗಾರ್ತಿಯನ್ನಾಗಿ ಮಾಡಿದ್ದಾರೆಂದು ಕುಟುಂಬದವರ ವಿರುದ್ಧ ಆಚಾರ್ಯ ಬೇಸರ ಹೊರಹಾಕಿದ್ದಾರೆ.

