ಹೊಸದಿಗಂತ ವರದಿ ಮೈಸೂರು:
ಆದಿ ಅಂತ್ಯವಿಲ್ಲದ ಭಾರತೀಯ ಸಂಸ್ಕೃತಿಯ ನ್ನು ಎಲ್ಲರೂ ರಕ್ಷಿಸಿ ಬೆಳೆಸಬೇಕಾಗಿದೆ ಎಂದು ರಾಜ್ಯ ಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಗುರುವಾರ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ರುವ ಸುತ್ತೂರು ಮಠದಲ್ಲಿ ಏರ್ಪಡಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ 107ನೇ ಜಯಂತಿ ಮಹೋತ್ಸವ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸನಾತನ ಸಂಸ್ಕೃತಿಯಾದ ಭಾರತೀಯ ಸಂಸ್ಕೃತಿಯ ಯನ್ನು ಅನಾದಿ ಕಾಲದಿಂದಲೂ ನಮ್ಮ ಋಷಿ ಮುನಿಗಳು ಬೆಳೆಸಿಕೊಂಡು ಬಂದಿದ್ದಾರೆ. ಇಡೀ ವಿಶ್ವವನ್ನೇ ಒಂದು ಕುಟುಂಬ ಎಂದು ಋಷಿ ಮುನಿಗಳು ತಿಳಿಸಿದ್ದಾರೆ. ಆ ವಸುದೈವ ಕುಟುಂಬದ ಪರಿಕಲ್ಪನೆ ಯ ಸಾಕಾರಗೊಳ್ಳಬೇಕಾಗಿದೆ.
ಇಡೀ ವಿಶ್ವವೇ ಸನಾತನ ಭಾರತೀಯ ಸಂಸ್ಕೃತಿಯ ನ್ನು ಒಪ್ಪಿ, ಅಪ್ಪಿಕೊಳ್ಳುತ್ತಿವೆ. ಹಾಗಾಗಿ ಇಡೀ ವಿಶ್ವೇ ಬಂಧು ಎಂದು ತಿಳಿಸುವ ನಮ್ಮ ಪುರಾತನ ಸಂಸ್ಕೃತಿಯ ನ್ನು ಉಳಿಸಿಕೊಂಡು ಬೆಳೆಸಬೇಕು ಎಂದು ತಿಳಿಸಿದರು. ಕಾರ್ಯಕ್ರಮ ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮಿ ಮಾತನಾಡಿದರು. ಸಾನ್ನಿಧ್ಯವನ್ನು ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿ ವಹಿಸಿದ್ದರು. ನಗರಪಾಲಿಕೆ ಯ ಮೇಯರ್ ಸುನಂದಾ ಪಾಲನೇತ್ರ ಮತ್ತಿತರರು ಉಪಸ್ಥಿತರಿದ್ದರು