ಹೊಸದಿಗಂತ ವರದಿ, ಬನವಾಸಿ:
ಮಾಂಸಕ್ಕಾಗಿ ಜಿಂಕೆಯನ್ನು ಕೊಂದಿದ್ದ ಇಬ್ಬರನ್ನು ಬನವಾಸಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಕಾರ್ಯ ನಡೆದಿದೆ.
ಸಮೀಪದ ಕಾನಕೊಪ್ಪದ ಮಾದೇವ ಮಡಿವಾಳ, ಶಿವಪ್ಪ ಬಸ್ಯಾ ಗೌಡ ಬಂಧಿತರಾಗಿದ್ದಾರೆ. ಇನ್ನೋರ್ವ ಆರೋಪಿ ಬ್ಯಾಗದ್ದೆಯ ಶಿವರಾಮ ನಾಯ್ಕ ಪರಾರಿಯಾಗಿದ್ದಾನೆ. ಆರೋಪಿತರು ಕಾನಕೊಪ್ಪ ಅರಣ್ಯ ಪ್ರದೇಶದಲ್ಲಿ ಆ.17 ರಂದು ಜಿಂಕೆ ಬೇಟೆ ಮಾಡಿದ್ದರಲ್ಲದೇ,
ಮಾಂಸವನ್ನು ಸಿದ್ಧಪಡಿಸಿದ್ದರು. ಡಿಎಫ್ ಒ ಅಜ್ಜಯ್ಯ ಅವರ ಮಾರ್ಗದರ್ಶನದಲ್ಲಿ ಆರ್ ಎಫ್ ಒ ಉಷಾ ಕಬ್ಬೆರ ಹಾಗೂ ತಂಡ ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ.