ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಆದರ್ಶ ನಗರ ರೈಲ್ವೆ ನಿಲ್ದಾಣದ ಬಳಿ ಅರೆನಗ್ನ ಸ್ಥಿತಿಯಲ್ಲಿದ್ದ ಮಹಿಳೆಯ ಶವ ಪತ್ತೆಯಾದ ಘಟನೆ ಸ್ಥಳೀಯ ಪ್ರದೇಶದಲ್ಲಿ ಭೀತಿಯನ್ನು ಸೃಷ್ಟಿಸಿದೆ. ನಿಲ್ದಾಣದ ಆವರಣದ ಪಕ್ಕದ ಪೊದೆಗಳಲ್ಲಿ ಕಂಡುಬಂದ ಈ ಶವದಲ್ಲಿ ಹಲವಾರು ಗಾಯದ ಗುರುತುಗಳು ಕಂಡುಬಂದಿದ್ದು, ಹರಿತವಾದ ಆಯುಧದಿಂದ ದಾಳಿ ನಡೆದಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಸಬ್ಜಿ ಮಂಡಿ ಪ್ರದೇಶದ ರೈಲ್ವೆ ಸಿಬ್ಬಂದಿ ಮಾಹಿತಿ ನೀಡಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಶೆಡ್ ನಂ.2 ರ ಹಿಂದಿನ ಹಳಿಗಳ ಬಳಿ ಸುಮಾರು 40 ರಿಂದ 42 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಮುಖ ಹಾಗೂ ತಲೆಯ ಮೇಲೆ ಆಳವಾದ ಗಾಯಗಳು ಕಂಡುಬಂದಿದ್ದು, ದೇಹದ ಮೇಲಂತೂ ಹಲವೆಡೆ ತಿವಿದ ಗುರುತುಗಳು ಸ್ಪಷ್ಟವಾಗಿದ್ದವು. ಪ್ರಾಥಮಿಕ ತನಿಖೆಯ ಪ್ರಕಾರ, ಮೃತಳು ಅಲೆಮಾರಿ ಅಥವಾ ಚಿಂದಿ ಆಯುವ ಮಹಿಳೆಯಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

