April 30, 2026
Thursday, April 30, 2026
spot_img

ದುಬೈ ಮೇಲೆ ಮತ್ತೆ ದಾಳಿ: ಇರಾನಿ ಡ್ರೋನ್ ನಿಂದ ಮರೀನಾ ಟವರ್ ಉಡೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್–ಇರಾನ್–ಅಮೆರಿಕಾ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆ ದುಬೈದಲ್ಲೂ ದಾಳಿಯ ಆತಂಕಕಾರಿ ಘಟನೆ ನಡೆದಿದೆ. ಶನಿವಾರ ದುಬೈ ಮರೀನಾ ಪ್ರದೇಶದಲ್ಲಿರುವ 23 ಮರೀನಾ ಟವರ್ ಮೇಲೆ ಡ್ರೋನ್ ದಾಳಿ ನಡೆದಿದ್ದು, ಕಟ್ಟಡದ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಘಟನೆಯ ನಂತರ ಮರೀನಾ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದು, ಸ್ಥಳೀಯರು ಈ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸುಮಾರು 90 ಅಂತಸ್ತಿನ ಐಷಾರಾಮಿ ಗೋಪುರವಾಗಿರುವ ಈ ಕಟ್ಟಡದ ಬಳಿ ತುರ್ತು ಸೇವಾ ಸಿಬ್ಬಂದಿ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ದುಬೈ ಮಾಧ್ಯಮ ಕಚೇರಿ ಮಾಹಿತಿ ನೀಡಿರುವಂತೆ, ದಾಳಿಯನ್ನು ಬಹುತೇಕ ತಡೆಹಿಡಿಯಲಾಗಿದ್ದು ಯಾವುದೇ ಗಾಯಗಳ ವರದಿ ಬಂದಿಲ್ಲ.

ಇದನ್ನೂ ಓದಿ:

ಫೆಬ್ರವರಿ 28ರಂದು ಅಮೆರಿಕಾ ಮತ್ತು ಇಸ್ರೇಲ್ ನಡೆಸಿದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಹಲವು ದೇಶಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸುತ್ತಿದೆ. ಯುಎಇ ರಕ್ಷಣಾ ವ್ಯವಸ್ಥೆಗಳು ಅನೇಕ ದಾಳಿಗಳನ್ನು ತಡೆದಿದ್ದರೂ ಕೆಲವೆಡೆ ಸ್ಫೋಟಗಳ ವರದಿಯಾಗಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ದುಬೈಗೆ ಬರುವ ಮತ್ತು ಹೊರಡುವ ಕೆಲವು ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದು, ಜಾಗತಿಕ ತೈಲ ಬೆಲೆಗಳ ಮೇಲೂ ಇದರ ಪರಿಣಾಮ ಕಂಡುಬರುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !