ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಮವಾರ ರಾತ್ರಿ ಜಮ್ಮುವಿನ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಒಳನುಸುಳುವಿಕೆ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದ ರಜೌರಿಯ ನೌಶೇರಾ ಸೆಕ್ಟರ್‌ನಲ್ಲಿರುವ ಎಲ್‌ಒಸಿ ಗಡಿಯಲ್ಲಿ ಭಾರತೀಯ ಸೇನೆಯು ಒಳನುಸುಳುವಿಕೆಯ ಪ್ರಯತ್ನವನ್ನು ಯಶಸ್ವಿಯಾಗಿ ನಿಲ್ಲಿಸಿದೆ ಎಂದು ಜಮ್ಮುವಿನ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಇದಕ್ಕೂ ಮೊದಲು ಆಗಸ್ಟ್ 21 ರಂದು, ನೌಶೇರಾ ಪಟ್ಟಣದ ಸೆಹರ್ ಮಕ್ರಿ ಪ್ರದೇಶದಲ್ಲಿನ LOC ಯಲ್ಲಿ ಭಾರತೀಯ ಸೇನಾ ಪಡೆಗಳು ಆತ್ಮಾಹುತಿ ದಾಳಿಗೆ ಬರುತ್ತಿದ್ದ ಒಬ್ಬ ಒಳನುಸುಳುಕೋರನ ಮೇಲೆ ಗುಂಡು ಹಾರಿಸಿ ಬಂಧಿಸಿದರು. ಸೆಹರ್ ಮಕ್ರಿ ಪ್ರದೇಶದಲ್ಲಿ ತಬಾರಕ್ ಹುಸೇನ್ (26) ಎಂದು ಗುರುತಿಸಲಾದ ನುಸುಳುಕೋರ ಅನುಮಾನಾಸ್ಪದ ಚಟುವಟಿಕೆಯಲ್ಲಿ ತೊಡಗಿರುವುದು ಗಮನಕ್ಕೆ ಬಂದಿತ್ತು.