ಮನೆಯಲ್ಲಿ ಮಾಡುವ ಸಣ್ಣ–ಪುಟ್ಟ ತಂಬುಳಿಗಳು ಊಟದ ರುಚಿಯನ್ನು ಎರಡು ಪಟ್ಟು ಹೆಚ್ಚಿಸುತ್ತವೆ. ವಿಶೇಷವಾಗಿ ಒಂದೆಲಗದಿಂದ ಮಾಡುವ ತಂಬುಳಿ ತಂಪು, ಹಸಿವು ಹೆಚ್ಚಿಸುವ ಗುಣ, ಜೊತೆಗೆ ಅಡುಗೆಮನೆಯಲ್ಲಿ ಕಡಿಮೆ ಸಮಯದಲ್ಲಿ ರೆಡಿ ಆಗುವುದರಿಂದ ಎಲ್ಲರ ಮನಗೆದ್ದಿದೆ.
ಬೇಕಾಗುವ ಸಾಮಗ್ರಿಗಳು:
ಒಂದೆಲಗ – 1 ಕಪ್
ಮೊಸರು – 1 ಕಪ್
ತೆಂಗಿನ ತುರಿ – 2 ಟೇಬಲ್ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಹಸಿಮೆಣಸಿನಕಾಯಿ – 1
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಸ್ವಲ್ಪ
ಎಣ್ಣೆ – 1 ಟೀ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಕರಿಬೇವು – ಸ್ವಲ್ಪ
ಮೆಣಸಿನಕಾಯಿ – 1
ಮಾಡುವ ವಿಧಾನ:
ಒಂದೆಲಗವನ್ನು ಚೆನ್ನಾಗಿ ತೊಳೆದು ಕುದಿಯುವ ನೀರಲ್ಲಿ 2–3 ನಿಮಿಷ ಬೇಯಿಸಿ ನೀರು ತೆಗೆದು ಇಡಿ.
ಮಿಕ್ಸರ್ ಜಾರಿಗೆ ಬೇಯಿಸಿದ ಒಂದೆಲಗ, ತೆಂಗಿನ ತುರಿ, ಜೀರಿಗೆ, ಹಸಿಮೆಣಸಿನಕಾಯಿ, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಈ ಪೇಸ್ಟ್‌ಗೆ ಮೊಸರು ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಒಗ್ಗರಣೆಗೆ ಸಾಸಿವೆ, ಕರಿಬೇವು, ಮೆಣಸಿನಕಾಯಿ ಎಣ್ಣೆಯಲ್ಲಿ ತಂಬುಳಿಗೆ ಹಾಕಿ.

