August 21, 2026
Friday, August 21, 2026
spot_img

FOOD | ಒಂದೆಲಗದ ತಂಬುಳಿ: ಊಟಕ್ಕೆ ಒಮ್ಮೆ ಮಾಡಿದರೆ ಮತ್ತೆ ಮತ್ತೆ ತಿನ್ಬೇಕು ಅನಿಸುತ್ತೆ

ಮನೆಯಲ್ಲಿ ಮಾಡುವ ಸಣ್ಣ–ಪುಟ್ಟ ತಂಬುಳಿಗಳು ಊಟದ ರುಚಿಯನ್ನು ಎರಡು ಪಟ್ಟು ಹೆಚ್ಚಿಸುತ್ತವೆ. ವಿಶೇಷವಾಗಿ ಒಂದೆಲಗದಿಂದ ಮಾಡುವ ತಂಬುಳಿ ತಂಪು, ಹಸಿವು ಹೆಚ್ಚಿಸುವ ಗುಣ, ಜೊತೆಗೆ ಅಡುಗೆಮನೆಯಲ್ಲಿ ಕಡಿಮೆ ಸಮಯದಲ್ಲಿ ರೆಡಿ ಆಗುವುದರಿಂದ ಎಲ್ಲರ ಮನಗೆದ್ದಿದೆ.

ಬೇಕಾಗುವ ಸಾಮಗ್ರಿಗಳು:

ಒಂದೆಲಗ – 1 ಕಪ್
ಮೊಸರು – 1 ಕಪ್
ತೆಂಗಿನ ತುರಿ – 2 ಟೇಬಲ್ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಹಸಿಮೆಣಸಿನಕಾಯಿ – 1
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಸ್ವಲ್ಪ
ಎಣ್ಣೆ – 1 ಟೀ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಕರಿಬೇವು – ಸ್ವಲ್ಪ
ಮೆಣಸಿನಕಾಯಿ – 1

ಮಾಡುವ ವಿಧಾನ:

ಒಂದೆಲಗವನ್ನು ಚೆನ್ನಾಗಿ ತೊಳೆದು ಕುದಿಯುವ ನೀರಲ್ಲಿ 2–3 ನಿಮಿಷ ಬೇಯಿಸಿ ನೀರು ತೆಗೆದು ಇಡಿ.

ಮಿಕ್ಸರ್ ಜಾರಿಗೆ ಬೇಯಿಸಿದ ಒಂದೆಲಗ, ತೆಂಗಿನ ತುರಿ, ಜೀರಿಗೆ, ಹಸಿಮೆಣಸಿನಕಾಯಿ, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಈ ಪೇಸ್ಟ್‌ಗೆ ಮೊಸರು ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಒಗ್ಗರಣೆಗೆ ಸಾಸಿವೆ, ಕರಿಬೇವು, ಮೆಣಸಿನಕಾಯಿ ಎಣ್ಣೆಯಲ್ಲಿ ತಂಬುಳಿಗೆ ಹಾಕಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !