ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಗ್ರಿಗಳು:
2 ಕಪ್ ಅನ್ನ
1/2 ಹಸಿ ತೆಂಗಿನ ತುರಿ
2 ಟೀಚಮಚ ತುಪ್ಪ
2 ಟೀಚಮಚ ಕಡಲೆ ಬೇಳೆ
2 ಟೀ ಚಮಚ ಉದ್ದಿನ ಬೇಳೆ
10 ರಿಂದ 12 ಗೋಡಂಬಿ
3 ರಿಂದ 4 ಹಸಿ ಮೆಣಸಿನಕಾಯಿ
ಕರಿಬೇವಿನ ಎಲೆ
ರುಚಿಗೆ ತಕ್ಕಂತೆ ಉಪ್ಪು
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
ಮೊದಲಿಗೆ ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ತುಪ್ಪ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ಬಳಿಕ ಅದಕ್ಕೆ ಕಡಬೇಳೆ, ಉದ್ದಿನಬೇಳೆ ಹಾಕಿ ಹುರಿಯಿರಿ ನಂತರ ಸಾಸಿವೆ, ಜೀರಿಗೆ ಒಣಮೆಣಸಿನ ಎರಡು, ಹಸಿಮೆಣಸಿನಕಾಯಿ ಹಾಕಿ ಸ್ವಲ್ಪ ಹೊತ್ತು ಬಾಡಿಸಿ. ಬಳಿಕ ಗೋಡಂಬಿ, ಕರಿಬೇವಿನ ಎಲೆ ಹಾಕಿ ಹುರಿಯಿರಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಲ್ಲವನ್ನು ಕಲಕಿ ಈಗ ಅದಕ್ಕೆ ಮಾಡಿಟ್ಟುಕೊಂಡ ಉದುರು ಉದುರಾಗಿರು ಅನ್ನವನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ಈಗ ಹಸಿ ತೆಂಗಿನ ತುರಿಯನ್ನು ಹಾಕಿ ಮತ್ತೊಮ್ಮೆ ಹಾಕಿ ಉಪ್ಪು ಸರಿಯಾಗಿದ್ಯಾ ಎಂದು ಪರಿಶೀಲಿಸಿ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಉದುರಿಸಿ ಸವಿಯಿರಿ. (ಅವಶ್ಯಕತೆಯಿದ್ದರೆ ನಿಂಬೆಹಣ್ಣಿನ ರಸ ಹಾಕಬಹುದು)