ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಅತಿದೊಡ್ಡ ಐಟಿ ಕಂಪನಿಗಳಲ್ಲಿ ಒಂದಾದ ಟಿಸಿಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್) ವರ್ಷಗಳ ನಂತರ ಮನೆಯಿಂದಲೇ ಕೆಲಸ ಮಾಡುವುದನ್ನು ಕೊನೆಗೊಳಿಸುತ್ತಿದೆ. ಟೆಕ್ ಕಂಪನಿಯು ತನ್ನ ಉದ್ಯೋಗಿಗಳನ್ನು ನವೆಂಬರ್ನಿಂದ ಕಚೇರಿಗೆ ಹಿಂತಿರುಗುವಂತೆ ಕೇಳಿದೆ.
ಈ ವರ್ಷ ನವೆಂಬರ್ 15 ರೊಳಗೆ ಮತ್ತೆ ಕಚೇರಿಗೆ ಸೇರಲು ತನ್ನ ಉದ್ಯೋಗಿಗಳಿಗೆ ಟಿಸಿಎಸ್ ಕೇಳಿದೆ. ಕೊವಿಡ್ ಸಾಂಕ್ರಾಮಿಕದ ಪ್ರಾರಂಭದಿಂದಲೂ ಐಟಿ ಕಂಪನಿಯು ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿತ್ತು.
ಆದರೆ ಪ್ರಸ್ತುತ ವರ್ಕ್ ಫ್ರಂ ಹೋಮ್ ಗೆ ಇತಿಶ್ರೀ ಹಾಡಿ ಪುನಃ ಕಛೇರಿಯಿಂದಲೇ ಕೆಲಸ ನಿರ್ವಹಿಸುವ ವಿಧಾನನ್ನು ಕಂಪನಿ ಜಾರಿಗೆ ತರುತ್ತಿದೆ. ನವೆಂಬರ್ ನಂತರ TCS ಮನೆಯಿಂದ ಕೆಲಸ ಮಾಡಲು ಅನುಮತಿಸುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ಪ್ರತಿಯೊಬ್ಬ ಉದ್ಯೋಗಿ ಕೆಲಸಕ್ಕಾಗಿ ಕಚೇರಿಗೆ ಹೋಗಬೇಕಾಗುತ್ತದೆ. ಕಂಪನಿಯ ಉದೋಗಿಗಳಲ್ಲಿ ಶೇ.95ರಷ್ಟು ಮಂದಿ ಭಾಗಶಃ ಹಾಗೂ ಶೇ.70ಕ್ಕಿಂತ ಹೆಚ್ಚು ಜನರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿರುವುದರಿಂದ ಕಂಪನಿಯು ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಕರೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ, ಕಂಪನಿಯು ಸುಮಾರು 20 ರಿಂದ 25 ಪ್ರತಿಶತದಷ್ಟು ಉದ್ಯೋಗಿಗಳು ಕಚೇರಿಗೆ ಮರಳಿದ್ದಾರೆ. ಪ್ರಸ್ತುತ ಎಲ್ಲಾ ಉದ್ಯೋಗಿಗಳನ್ನು ಕಚೇರಿಗೆ ತರಲು ಕಂಪನಿ ಮುಂದಾಗಿದೆ.