ಹೊಸದಿಗಂತ ಡಿಜಿಟಲ್ ಡೆಸ್ಕ್:
ನವೆಂಬರ್ 26 ರಿಂದ ಡಿಸೆಂಬರ್ 4ರವರೆಗೆ ದತ್ತಪೀಠದಲ್ಲಿ ದತ್ತಜಯಂತಿ ನಡೆಯಲಿದೆ.
ಹೀಗಾಗಿ ಭಕ್ತರು ಲಾಂಗ್ ಚಾರ್ಸಿ ಗಾಡಿ ತಂದರೆ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ. ಅಲ್ಲದೇ ವರ್ಷಪೂರ್ತಿ ಸುರಿದ ಮಳೆಯಿಂದ ಗಿರಿ ಭಾಗದಲ್ಲಿ ಅಲ್ಲಲ್ಲಿ ರಸ್ತೆ ಬದಿ ಮಣ್ಣು ಕುಸಿದಿದೆ. ಇದರಿಂದ ಮುಂಜಾಗೃತ ಕ್ರಮವಾಗಿ ಡಿಸೆಂಬರ್ 1 ರಿಂದ 5ರ ವರೆಗೆ ಲಾಂಗ್ ಚಾರ್ಸಿ ಗಾಡಿಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
35 ಆಸನಗಳಿಗಿಂತ ಹೆಚ್ಚು ಸೀಟ್ ಇರುವ ಎಲ್ಲಾ ರೀತಿಯ ವಾಹನಗಳನ್ನು ನಿಷೇಧಿಸಲಾಗಿದೆ. ಈ ಆದೇಶ ಪೊಲೀಸ್-ಅಗ್ನಿಶಾಮಕ ವಾಹನಗಳಿಗೆ ಅನ್ವಯವಾಗುವುದಿಲ್ಲ.
ಡಿಸೆಂಬರ್ 2ರಂದು ಅನುಸೂಯ ಜಯಂತಿ, 3ರಂದು ಬೃಹತ್ ಶೋಭಾಯಾತ್ರೆ, 4ರಂದು 20 ಸಾವಿರ ಭಕ್ತರಿಂದ ದತ್ತಪಾದುಕೆ ದರ್ಶನ ನಡೆಯಲಿದೆ.

