ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಸ್ಫೋಟದ ಕುರಿತು ಜಮ್ಮು ಹಾಗೂ ಕಾಶ್ಮೀರದ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಾಬೂಬಾ ಮುಫ್ತಿ ವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದೆಹಲಿ ಕಾರ್ ಬಾಂಬ್ ಸ್ಫೋಟದಲ್ಲಿ ಟೆರರ್ ಡಾಕ್ಟರ್ ಕಾಶ್ಮೀರ ಮೂಲದ ಉಮರ್ ನಬಿಯೂ ಸೇರಿದಂತೆ ಒಟ್ಟು 1೫ ಜನ ಮೃತಪಟ್ಟಿದ್ದು, ಈ ದುರಂತದಲ್ಲಿ ಗಾಯಗೊಂಡವರ ಸ್ಥಿತಿ ಗಂಭೀರವಾಗಿದೆ. ಹೀಗಿರುವಾಗ ಮೆಹಾಬೂಬಾ ಮುಫ್ತಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ದೇಹಲಿ ಬಾಂಬ್ ಸ್ಫೋಟಕ್ಕೆ ಕೇಂದ್ರ ಸರ್ಕಾರದ ಕಾರಣ ಎಂದು ನೇರ ಆರೋಪ ಮಾಡಿದ್ದಾರೆ.
ಕೇಂದ್ರ ಸರ್ಕಾರವೂ ಕಣಿವೆ ರಾಜ್ಯದಲ್ಲಿ ಸೃಷ್ಟಿಸಿರುವ ವಿಷಕಾರಿ ವಾತಾವರಣದಿಂದಲೇ ಅಲ್ಲಿನ ಯುವ ಸಮುದಾಯ ಭಯೋತ್ಪಾದನೆಯ ಹಾದಿ ಹಿಡಿಯುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರವೇ ಜಮ್ಮು ಕಾಶ್ಮೀರದ ಯುವ ಟೆರರ್ ಡಾಕ್ಟರ್‌ಗಳು ನಡೆಸಿದ ಬಾಂಬ್ ದಾಳಿಗೆ ನೇರ ಕಾರಣ ಎಂದು ಮೆಹಬೂಬಾ ಆರೋಪಿಸಿದ್ದಾರೆ.
ಜಮ್ಮು ಕಾಶ್ಮೀರದ ಪೊಲೀಸರು ಬಯಲಿಗೆಳೆದ ಈ ವೈಟ್ ಕಾಲರ್ ಟೆರರ್ ಘಟಕದ ಹಿಂದಿರುವ ಬಹುತೇಕರು ವಿದ್ಯಾವಂತರು ಅದರಲ್ಲೂ ಕಾಶ್ಮೀರಿಗಳೇ ಆಗಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಹೀಗಿರುವಾಗ ಈ ಸ್ಫೋಟದಿಂದಾಗಿ ಕಾಶ್ಮೀರದ ಸಮಸ್ಯೆಗಳು ಕೆಂಪು ಕೋಟೆಯ ಮುಂದೆ ಪ್ರತಿಧ್ವನಿಸಿವೆ ಎಂದು ಮೆಹಾಬೂಬಾ ಮುಫ್ತಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ವಿಷಕಾರಿ ವಾತಾವರಣವನ್ನು ಸೃಷ್ಟಿಸಿದೆ, ಆ ವಾತಾವರಣವು ಕಾಶ್ಮೀರದ ಯುವಕರು ತಮ್ಮ ಮಾರ್ಗದಿಂದ ವಿಮುಖರಾಗಿ ತಮ್ಮದೇ ಆದ ಅಪಾಯಕಾರಿ ಮಾರ್ಗವನ್ನು ಸೃಷ್ಟಿಸಿಕೊಳ್ಳಲು ಕಾರಣವಾಗಿದೆ. ನಾನು ಆ ಯುವಕರಿಗೆ ಮತ್ತೊಮ್ಮೆ ಹೇಳುತ್ತೇನೆ, ಅವರು ಮಾಡುತ್ತಿರುವುದು ತಪ್ಪು. ಇಷ್ಟೊಂದು ಶಿಕ್ಷಣ ಪಡೆದ ನಂತರ ಈ ಕೆಲಸ ಮಾಡುವುದು ತಪ್ಪು ಎಂದು ಹೇಳಿದರು.
ಸರ್ಕಾರ ಕಾಶ್ಮೀರದಲ್ಲಿ ವಿನಾಶವನ್ನು ಸೃಷ್ಟಿಸಿದೆ. ಅವರು ಕಾಶ್ಮೀರದಲ್ಲಿ ದೌರ್ಜನ್ಯ ಎಸಗುತ್ತಾರೆ. ಸರ್ಕಾರ ಕಾಶ್ಮೀರದಲ್ಲಿ ಭಯೋತ್ಪಾದನೆಯ ವಾತಾವರಣವನ್ನು ಕೊನೆಗೊಳಿಸಬೇಕು. ಈ ಜನರು ಕಾಶ್ಮೀರದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹೇಳುತ್ತಾರೆ, ಆದರೆ ಕಾಶ್ಮೀರದ ಸಮಸ್ಯೆಗಳು ಏನು ಎಂಬುದನ್ನು ದೆಹಲಿಯ ಕೆಂಪು ಕೋಟೆಯ ಮುಂದೆ ವ್ಯಕ್ತಪಡಿಸಲಾಯಿತು ಅಷ್ಟೇ ಎಂದು ಮೆಹಾಬೂಬಾ ಹೇಳಿಕೆ ನೀಡಿದ್ದಾರೆ.
ನೀವು ಹಿಂದು-ಮುಸ್ಲಿಂ ಎಂದು ರಾಜಕೀಯ ಮಾಡುವ ಮೂಲಕ ಮತಗಳನ್ನು ಪಡೆಯಬಹುದು, ಆದರೆ ರಾಷ್ಟ್ರವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ದೆಹಲಿಗೆ ಏನಾದರೂ ತಿಳುವಳಿಕೆ ಇದೆಯೇ? ದೇಶವು ಕುರ್ಚಿಗಿಂತ ದೊಡ್ಡದಾಗಿದೆ ಎಂದು ಅವರು ಮೆಹಾಬೂಬಾ ಹೇಳಿದ್ದಾರೆ.ಮುಫ್ತಿ ಅವರ ಹೇಳಿಕೆಗೆ ಬಿಜೆಪಿಯ ಅನೇಕ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರು ಕೊಳಕು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕ ರವೀಂದರ್ ರೈನಾ ಖಂಡನೆ
ಇದು ಖಂಡನೀಯ. ಅವರು ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿ ಅವರು ಅಂತಹ ಹೇಳಿಕೆಗಳನ್ನು ನೀಡಬಾರದು. ಪ್ರಧಾನಿ ಮೋದಿ ಜಮ್ಮು ಮತ್ತು ಕಾಶ್ಮೀರಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ರವೀಂದರ್ ರೈನಾ ಹೇಳಿದ್ದಾರೆ.
ಮೆಹಬೂಬಾ ಮುಫ್ತಿ ಅವರ ಹೇಳಿಕೆ ಎಷ್ಟು ದುರದೃಷ್ಟಕರ. ವಿಶೇಷವಾಗಿ ನೀವು ಜಮ್ಮು ಮತ್ತು ಕಾಶ್ಮೀರದ ಯುವಕರೊಂದಿಗೆ ನಿಲ್ಲಬೇಕಾದ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ತುಂಬಾ ಕೆಳಮಟ್ಟಕ್ಕೆ ಇಳಿದಿದ್ದಾರೆ. ಅವರು ಕರುಣಾಜನಕ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ನಾಯಕ ಅಭಿಜೀತ್ ಜಸ್ರೋಟಿಯಾ ಹೇಳಿದ್ದಾರೆ.

