July 29, 2026
Wednesday, July 29, 2026
spot_img

ರೈಲ್ವೆ ಪ್ರಯಾಣಕ್ಕೂ ತಟ್ಟಿದೆ ಎಲ್‌ಪಿಜಿ ಅಭಾವದ ಬಿಸಿ: ಇನ್ಮುಂದೆ ರೈಲುಗಳಲ್ಲಿ ಊಟ ಸಿಗುವುದು ಡೌಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಪಶ್ಚಿಮ ಏಷ್ಯಾದ ಯುದ್ಧದಿಂದಾಗಿ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿದ್ದು, . ಇದರ ಕರಿನೆರಳು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದ (IRCTC) ಮೇಲೆ ಬಿದ್ದಿದ್ದು, ರೈಲುಗಳಲ್ಲಿ ಫುಡ್‌ ಕ್ಯಾಟರಿಂಗ್‌ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಸಾಧ್ಯತೆಯಿದೆ.

ಮಾರ್ಚ್ 10ರಂದು ಹೊರಡಿಸಲಾದ ಪತ್ರದಲ್ಲಿ, ರೈಲ್ವೆ ನಿಲ್ದಾಣಗಳಲ್ಲಿರುವ ಫುಡ್ ಪ್ಲಾಜಾಗಳು, ರಿಫ್ರೆಶ್‌ಮೆಂಟ್ ರೂಮ್‌ಗಳು ಮತ್ತು ಜನ ಆಹಾರ ಕೇಂದ್ರಗಳು ಅನಿಲದ ಕೊರತೆಯಾದಲ್ಲಿ ತಕ್ಷಣವೇ ಅಡುಗೆ ಮಾಡಲು ಪರ್ಯಾಯ ವಿಧಾನಗಳನ್ನು ಬಳಸುವಂತೆ ನಿರ್ದೇಶಿಸಿದೆ.

ರೈಲ್ವೆ ಅಧಿಕಾರಿಗಳ ಮಾಹಿತಿಯ ಪ್ರಕಾರ, ಐಆರ್‌ಸಿಟಿಸಿ ತನ್ನ ಬೇಸ್ ಕಿಚನ್ ಮತ್ತು ಆನ್‌ಬೋರ್ಡ್ ಕ್ಯಾಟರಿಂಗ್ ಸೇವೆಗಳ ಮೂಲಕ ಪ್ರತಿದಿನ ದೇಶಾದ್ಯಂತ ಸುಮಾರು 17 ಲಕ್ಷ ಊಟಗಳನ್ನು ಪೂರೈಸುತ್ತದೆ. ಇದೀಗ ಎಲ್‌ಪಿಜಿ ಕೊರತೆಯಾದರೆ ಪ್ರಯಾಣಿಕರಿಗೆ ಭಾರಿ ಅನಾನುಕೂಲವಾಗಲಿದೆ. ಒಂದು ವೇಳೆ ಎಲ್‌ಪಿಜಿ ಪೂರೈಕೆ ಸ್ಥಗಿತಗೊಂಡರೆ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಕ್ಯಾಟರರ್‌ಗಳಿಗೆ ಸೂಚಿಸಲಾಗಿದೆ.

ಜೊತೆಗೆ ಟಿಕೆಟ್ ಬುಕ್ ಮಾಡುವಾಗಲೇ ಊಟಕ್ಕೆ ಮುಂಗಡ ಹಣ ಪಾವತಿಸಿರುವ ಪ್ರಯಾಣಿಕರಿಗೆ ಯಾವುದೇ ಆರ್ಥಿಕ ನಷ್ಟವಾಗುವುದಿಲ್ಲ . ಊಟದ ವೆಚ್ಚವನ್ನು ಪ್ರಯಾಣಿಕರಿಗೆ ಮರುಪಾವತಿ ಮಾಡಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !