Tuesday, November 18, 2025

Rice series 31 | ಪದೇ ಪದೇ ತಿನ್ಬೇಕು ಅನ್ನಿಸೋ ಶೇಂಗಾ ಚಿತ್ರಾನ್ನ! ನೀವೂ ಒಮ್ಮೆ ಟ್ರೈ ಮಾಡಿ

ಬೆಳಗಿನ ಉಪಹಾರಕ್ಕೆ ಬೇಗನೆ ಮಾಡುವಷ್ಟು ಸಿಂಪಲ್, ಮತ್ತೆ ತಿನ್ನೋಕೆ ಸಖತ್ ಟೇಸ್ಟಿ! ಬಿಸಿ ಅನ್ನ ಇದ್ದರೆ ಇನ್ನೂ ಬೇಗ ತಯಾರಾಗುತ್ತದೆ ಈ ಶೇಂಗಾ ಚಿತ್ರಾನ್ನ.

ಬೇಕಾಗುವ ಸಾಮಗ್ರಿಗಳು:

ಬೇಯಿಸಿದ ಅನ್ನ – 2 ಕಪ್
ಶೇಂಗಾ (ಕರಿದು, ಪುಡಿ ಮಾಡಿದ್ದು) – ½ ಕಪ್
ಕ್ಯಾಪ್ಸಿಕಂ (ಐಚ್ಚಿಕ) – 2 ಟೇಬಲ್ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಉದ್ದಿನ ಬೇಳೆ – 1 ಟೀ ಸ್ಪೂನ್
ಕಡಲೆ ಬೇಳೆ – 1 ಟೀ ಸ್ಪೂನ್
ಹಸಿಮೆಣಸು – 2
ಕರಿಬೇವು – ಕೆಲವು
ಅರಿಶಿನ – ¼ ಟೀ ಸ್ಪೂನ್
ನಿಂಬೆ ರಸ – 1 ಟೀ ಸ್ಪೂನ್
ಏಣ್ಣೆ – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ:

ಮೊದಲಿಗೆ ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ ಬಂಗಾರದ ಬಣ್ಣಕ್ಕೆ ಬರುವಂತೆ ಹುರಿಯಿರಿ. ನಂತರ ಹಸಿಮೆಣಸು, ಕರಿಬೇವು, ಕ್ಯಾಪ್ಸಿಕಂ ಹಾಕಿ ಸ್ವಲ್ಪ ಹುರಿಯಿರಿ. ಅರಿಶಿನ ಮತ್ತು ಉಪ್ಪು ಹಾಕಿ ಕಲಸಿ. ಈಗ ಬೇಯಿಸಿದ ಅನ್ನವನ್ನು ಹಾಕಿ ನಿಧಾನವಾಗಿ ಮಿಕ್ಸ್ ಮಾಡಿ. ಈಗ ಶೇಂಗಾ ಪುಡಿ ಸೇರಿಸಿ ಚೆನ್ನಾಗಿ ಕಲೆಸಿಕೊಳ್ಳಿ. ಕೊನೆಯಲ್ಲಿ ನಿಂಬೆ ರಸ ಹಾಕಿ ಮಿಶ್ರಣ ಮಾಡಿ ಅಗತ್ಯವಿದ್ದರೆ ಮತ್ತಷ್ಟು ಶೇಂಗಾ ಪುಡಿ ಸೇರಿಸಿ.

error: Content is protected !!