ಮೇಷ
ಬಿಡುವಿಲ್ಲದ ದಿನ. ಸಹೋದ್ಯೋಗಿ ನಿಮಗೆ ಮೋಸ ಮಾಡಬಹುದು. ಪ್ರೀತಿಪಾತ್ರರಿಂದ ಅಚ್ಚರಿಯ ಕೊಡುಗೆ. ಅನಾರೋಗ್ಯವಾದರೆ ನಿರ್ಲಕ್ಷಿಸದಿರಿ.
ವೃಷಭ
ವೃತ್ತಿಯ ಜಾಗದಲ್ಲಿ ನಯವಂಚಕರ ಕುರಿತು ಎಚ್ಚರದಿಂದಿರಿ. ನಯವಾಗಿ ನಿಮ್ಮ ಕತ್ತು ಕುಯ್ಯಲು ಯತ್ನಿಸುವರು. ಕುಟುಂಬದಲ್ಲಿ ಸಮಸ್ಯೆ.
ಮಿಥುನ
ಸಣ್ಣ ಪ್ರಮಾಣದ ಧನನಷ್ಟ ಸಂಭವ. ಆದರೆ ಇದು ನಿಮಗೆ ದೊಡ್ಡ ಪಾಠ ಕಲಿಸುವುದು. ಭಾವುಕರಾಗದಿರಿ, ಬದುಕಲು ದೃಢ ಹೃದಯ ಬೇಕು.
ಕಟಕ
ನಿಮಗಿಂದು ಮಿಶ್ರಫಲದ ದಿನ. ವೃತ್ತಿಯಲ್ಲಿ ಹಿನ್ನಡೆ, ಅಸಮಾಧಾನ. ಕೌಟುಂಬಿಕವಾಗಿ ಸಂತೋಷ. ಬಂಧುಗಳಿಂದ ಸಹಕಾರ.
ಸಿಂಹ
ಎಲ್ಲ ಜಂಜಾಟ ಮರೆತು ನಿರಾಳವಾಗಿರಲು ಬಯಸುವಿರಿ. ವಿಶ್ರಾಂತಿ, ಪ್ರವಾಸ ಇದಕ್ಕೆ ಸೂಕ್ತ. ವೃತ್ತಿಯ ಹಿನ್ನಡೆಯನ್ನು ಮನಸ್ಸಿಗೆ ಹಚ್ಚಿಕೊಳ್ಳದಿರಿ.
ಕನ್ಯಾ
ಇತರರ ಖಾಸಗಿ ವಿಷಯದಲ್ಲಿ ಹೆಚ್ಚು ಆಸಕ್ತಿ ವಹಿಸದಿರಿ. ಅದು ನಿಮಗೇ ಪ್ರತಿಕೂಲ ಆದೀತು. ಅನವಶ್ಯ ವಿವಾದಕ್ಕೆ ಸಿಲುಕಿಕೊಳ್ಳುವಿರಿ.
ತುಲಾ
ಕೆಲವು ಪ್ರಮುಖ ಕಾರ್ಯ ಇಂದು ಮುಗಿಸಲೇ ಬೇಕಾದ ಒತ್ತಡ. ಆದರೆ ಅದಕ್ಕೆ ಹಲವಾರು ಅಡ್ಡಿಗಳು. ದಿನದಂತ್ಯಕ್ಕೆ ನಿರಾಶೆ ಅನುಭವಿಸುವಿರಿ.
ವೃಶ್ಚಿಕ
ಮಾನಸಿಕ ದ್ವಂದ್ವ. ಯಾವುದೋ ವಿಚಾರದಲ್ಲಿ ಸರಿಯಾದ ನಿರ್ಧಾರಕ್ಕೆ ಬರಲಾಗದೆ ತೊಳಲಾಟ. ಇತರರ ಸಲಹೆ ಸೂಚನೆ ಪಡೆದು ಮುಂದುವರಿಯಿರಿ.
ಧನು
ಸಂಬಂಧವೊಂದನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ಆದರೆ ಇತರರಿಂದ ಅದೇ ಬಗೆಯ ಸ್ಪಂದನೆ ದೊರಕಲಾರದು. ಮಾನಸಿಕ ಒತ್ತಡ.
ಮಕರ
ಕುಟುಂಬ ಸದಸ್ಯರಿಂದ ಮುಖ್ಯ ಕೆಲಸದಲ್ಲಿ ಅಸಹಕಾರ ಎದುರಿಸುವಿರಿ. ಮನೆಕಾರ್ಯಕ್ಕೆ ಅಡ್ಡಿ. ವೃತ್ತಿಯಲ್ಲಿ ಮೇಲಧಿಕಾರಿಗಳ ಒತ್ತಡ.
ಕುಂಭ
ಭಾವನಾತ್ಮಕ ಏರುಪೇರು. ಆಪ್ತರ ನಿರಾಕರಣೆ ಎದುರಿಸುವಿರಿ. ಹಿನ್ನಡೆ ಯನ್ನು ಧೈರ್ಯದಿಂದ ಎದುರಿಸಿ. ಛಲದಿಂದ ಮೇಲೆದ್ದು ನಿಲ್ಲಿ.
ಮೀನ
ಭಾವುಕ ಸನ್ನಿವೇಶ ಎದುರಿಸುವಿರಿ. ನಿಮ್ಮ ಖಾಸಗಿ ಬದುಕಿನಲ್ಲಿ ಮಹತ್ವದ ಬೆಳವಣಿಗೆ ಉಂಟಾದೀತು. ಎಲ್ಲರ ಸಹಕಾರ ಪಡೆದು ಮುಂದುವರಿಯಿರಿ.