ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಪ್ರತಿಷ್ಠಿತ ಆ್ಯಶಸ್ ಸರಣಿಗೆ ಕೌಂಟ್‌ಡೌನ್ ಆರಂಭವಾಗುತ್ತಿದ್ದಂತೆಯೇ ಆಸ್ಟ್ರೇಲಿಯಾ ಶಿಬಿರದಿಂದ ಗಾಯದ ಸುದ್ದಿಗಳು ಹೊರಬಿದ್ದಿವೆ. ನವೆಂಬರ್ 21 ರಂದು ಪರ್ತ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ಗೆ ಆಸೀಸ್ ತಂಡದ ಮೂರು ಪ್ರಮುಖ ವೇಗಿಗಳು – ಪ್ಯಾಟ್ ಕಮಿನ್ಸ್, ಜೋಶ್ ಹೇಝಲ್‌ವುಡ್ ಮತ್ತು ಶಾನ್ ಅಬಾಟ್ – ಅಲಭ್ಯರಾಗಿರುವುದು ತಂಡಕ್ಕೆ ದೊಡ್ಡ ಹಿನ್ನಡೆ.
ಆಸ್ಟ್ರೇಲಿಯಾ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್ ಸೊಂಟದ ಮೂಳೆಯ ನೋವಿನಿಂದ ಬಳಲುತ್ತಿರುವ ಕಾರಣ ಮೊದಲ ಪಂದ್ಯಕ್ಕೆ ಹೊರಗುಳಿದರೆ, ನಾಯಕತ್ವ ಜವಾಬ್ದಾರಿ ಸ್ಟೀವ್ ಸ್ಮಿತ್ ಅವರ ಭುಜಕ್ಕೆ ಗಾಯವಾಗಿದೆ. ಇದೇ ವೇಳೆ ಮಂಡಿರಜ್ಜು ಸಮಸ್ಯೆಯಿಂದ ಜೋಶ್ ಹೇಝಲ್‌ವುಡ್ ಕೂಡ ಮೊದಲ ಟೆಸ್ಟ್ ತಪ್ಪಲಿದ್ದು, ಡಿಸೆಂಬರ್ 4ರಿಂದ ಆರಂಭವಾಗುವ ಎರಡನೇ ಪಂದ್ಯಕ್ಕೆ ಲಭ್ಯರಾಗುವ ನಿರೀಕ್ಷೆ ಇದೆ. ಮತ್ತೊಬ್ಬ ವೇಗಿ ಶಾನ್ ಅಬಾಟ್ ಕೂಡ ಅದೇ ರೀತಿಯ ನೋವಿನಿಂದ ಮೊದಲ ಟೆಸ್ಟ್ಗೆ ದೂರವಾಗಿದ್ದಾರೆ. ಇವರ ಬದಲಿಗೆ ಮೈಕೆಲ್ ನೇಸರ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ.
ಆದಾಗ್ಯೂ, ಇಂತಹ ಸವಾಲಿನ ನಡುವೆಯೂ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಶಕ್ತಿಶಾಲಿ ಆಟಗಾರರನ್ನು ಹೊಂದಿವೆ. ಆಸ್ಟ್ರೇಲಿಯಾದ ಪರ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಾಬುಶೇನ್ ಟೆಸ್ಟ್ ಪರಿಣಿತರಾಗಿ ಕಣಕ್ಕಿಳಿಯಲಿರುವ ವೇಳೆ, ಇಂಗ್ಲೆಂಡ್ ಪರ ಜೋ ರೂಟ್ ಮತ್ತು ಓಲಿ ಪೋಪ್ ಬ್ಯಾಟಿಂಗ್ ಬಲವಾಗಿಸಿದ್ದಾರೆ. ಸ್ಫೋಟಕ ಆಟಕ್ಕೆ ಆಸೀಸ್ ಪಡೆಯಲ್ಲಿ ಟ್ರಾವಿಸ್ ಹೆಡ್ ಸಜ್ಜಾಗಿದ್ದರೆ, ಇಂಗ್ಲೆಂಡ್ ತಂಡಕ್ಕೆ ಬಾಝ್‌ಬಾಲ್ ಶೈಲಿಯಲ್ಲಿ ರನ್‌ಗಳ ಸುರಿಮಳೆಯ ನಿರೀಕ್ಷೆ ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಮೇಲಿರಲಿದೆ. ಎರಡೂ ತಂಡಗಳ ಆಲ್‌ರೌಂಡರ್, ವೇಗಿ, ಸ್ಪಿನ್ನರ್ ವಿಭಾಗಗಳು ಸಮಬಲ ಹೊಂದಿರುವುದರಿಂದ ಈ ಆ್ಯಶಸ್ ಸರಣಿಯಲ್ಲಿ ಭರ್ಜರಿ ಪೈಪೋಟಿ ಅನಿವಾರ್ಯ.

