ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನೂತನ ಸಾರಥಿಯ ಆಯ್ಕೆಗೆ ದಿನ ನಿಗದಿಯಾಗಿದೆ.
ಅಕ್ಟೋಬರ್ 17ರಂದು ಮೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಸೆಪ್ಟಂಬರ್ ಮೂವತ್ತರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಅಕ್ಟೋಬರ್ 19ರಂದು ಫಲಿತಾಂಶ ಪ್ರಕಟವಾಗಲಿದೆ.
ಈ ಚುನಾವಣೆಯಲ್ಲಿ ‘ಅಭ್ಯರ್ಥಿಗಳು’ ಕಣಕ್ಕಿಳಿಯುತ್ತಾರೋ ಅಥವಾ ಅವಿರೋಧ ಆಯ್ಕೆಯೋ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.
ಈ ನಡುವೆ ಕಾಂಗ್ರೆಸ್ ಪಾಳಯದಲ್ಲಿ ಚುನಾವಣೆ ಪಾರದರ್ಶಕತೆಯಿಂದ ನಡೆಯಬೇಕು ಎಂಬ ಕೂಗು ಕೇಳಿಬರಲಾರಂಭಿಸಿದೆ. ಮತದಾರರ ಪಟ್ಟಿಯನ್ನು ಬಹಿರಂಗ ಪಡಿಸಬೇಕೆಂದು ಒಂದು ಗುಂಪಿನ ನಾಯಕರು ಒತ್ತಾಯಿಸುತ್ತಿದ್ದರೆ ಇದು ಸಾಧ್ಯವಿಲ್ಲ ಎಂದು ಪಕ್ಷದ ಹಿರಿಯ ಮುಖಂಡ ಮಧುಸೂಧನ್ ಮಿಸ್ತ್ರಿ ಹೇಳುತ್ತಿದ್ದಾರೆ. ಈ ನಡುವೆ ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷರಾಗುತ್ತಾರಾ ಎನ್ನುವ ಕುತೂಹಲವೂ ಕಾಂಗ್ರೆಸ್ ವಲಯ ಸಹಿತ ಜನತೆಯಲ್ಲಿದೆ.