ಷೇರುಪೇಟೆಯಲ್ಲಿ 200 ಪಾಯಿಂಟ್‌ ಜಿಗಿದ ಸೆನ್ಸೆಕ್ಸ್:‌ ಹೇಗಿದೆ ಇಂದಿನ ಮಾರುಕಟ್ಟೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ದುರ್ಬಲ ಜಾಗತಿಕ ಸೂಚನೆಗಳ ನಡುವೆ ದೇಶೀಯ ಷೇರು ಮಾರುಕಟ್ಟೆ ಮಾನದಂಡಗಳಾದ ಬಿಎಸ್‌ಇ ಸೆನ್ಸೆಕ್ಸ್ 200 ಪಾಯಿಂಟ್‌ಗಳ ಏರಿಕೆಯೊಂದಿಗೆ 59,000 ಕ್ಕೆ ತಲುಪಿದೆ ಮತ್ತು ಎನ್‌ಎಸ್‌ಇ ನಿಫ್ಟಿ 55 ಪಾಯಿಂಟ್‌ಗಳನ್ನು ಗಳಿಸಿ 17,594 ಕ್ಕೆ ತಲುಪಿದೆ.

ಟೆಕ್ ಮಹೀಂದ್ರಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಹೆಚ್‌ಸಿಎಲ್ ಟೆಕ್, ರಿಲಯನ್ಸ್ ಇಂಡಸ್ಟ್ರೀಸ್, ಎನ್‌ಟಿಪಿಸಿ, ಆಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ಸೆನ್ಸೆಕ್ಸ್‌ ನಲ್ಲಿ ಲಾಭ ಗಳಿಸಿವೆ.

ನೆಸ್ಲೆ ಇಂಡಿಯಾ, ಡಾ. ರೆಡ್ಡೀಸ್, ಹಿಂದೂಸ್ತಾನ್ ಯೂನಿಲಿವರ್, ಎಂ & ಎಂ, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಗಳು ಟಾಪ್‌ ಲೂಸರ್ಸ್‌ ಗಳ ಸಾಲಿಗೆ ಸೇರಿಕೊಂಡಿವೆ.

ವಿಶಾಲ ಮಾರುಕಟ್ಟೆಗಳು ಸಹ ದೃಢವಾಗಿ ಹೆಚ್ಚಿದ್ದು ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 0.7 ರಷ್ಟು ಏರಿಕೆ ಕಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!