ಹೊಸ ರೀತಿಯ, ಆಕರ್ಷಕ ಮತ್ತು ರುಚಿಕರವಾದ ತಿಂಡಿ ಬೇಕೆಂದರೆ ಪಿನ್‌ವೀಲ್ ಸಮೋಸಾ ಟ್ರೈ ಮಾಡಿ. ಸಾಮಾನ್ಯ ಸಮೋಸಾಗಿಂತ ಇದನ್ನ ತಯಾರಿಸೋ ವಿಧಾನ ಸ್ವಲ್ಪ ವಿಭಿನ್ನವಾದರೂ, ರುಚಿ ಮತ್ತು ಲುಕ್ ಎರಡೂ ನಿಮಗೆ ಖಂಡಿತವಾಗಿ ಇಷ್ಟವಾಗುತ್ತೆ. ಚಹಾ ಸಮಯಕ್ಕೆ, ಪಾರ್ಟಿ ಸ್ನ್ಯಾಕ್‌ಗಳಿಗೆ ಅಥವಾ ಮಕ್ಕಳಿಗೆ ಟಿಫಿನ್‌ಗೆ ಈ ಪಿನ್‌ವೀಲ್ ಸಮೋಸಾ ಹಿಟ್ ಐಟಂ.
ಬೇಕಾಗುವ ಸಾಮಗ್ರಿಗಳು:
ಮೈದಾ – 1 ಕಪ್
ಎಣ್ಣೆ – 2 ಟೀಸ್ಪೂನ್
ಉಪ್ಪು – ಸ್ವಲ್ಪ
ನೀರು – ಬೇಕಾದಷ್ಟು
ಆಲೂಗಡ್ಡೆ – 3
ಹಸಿಮೆಣಸಿನಕಾಯಿ – 2
ಶುಂಠಿ ಪೇಸ್ಟ್ – 1 ಟೀಸ್ಪೂನ್
ಜೀರಿಗೆ – 1/2 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಧನಿಯಾ ಪುಡಿ – 1 ಟೀಸ್ಪೂನ್
ಗರಂ ಮಸಾಲಾ – 1/2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ – 1 ಟೀಸ್ಪೂನ್
ತಯಾರಿಸುವ ವಿಧಾನ:
ಒಂದು ಪಾತ್ರೆಯಲ್ಲಿ ಮೈದಾ, ಉಪ್ಪು, ಎಣ್ಣೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ನಂತರ ನೀರು ಸೇರಿಸಿ ನಯವಾದ ಹಿಟ್ಟು ಕಲಸಿ 10 ನಿಮಿಷ ಮುಚ್ಚಿ ಇಡಿ.
ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಜೀರಿಗೆ, ಹಸಿಮೆಣಸಿನಕಾಯಿ ಮತ್ತು ಶುಂಠಿ ಪೇಸ್ಟ್ ಸೇರಿಸಿ. ಈಗ ಬೇಯಿಸಿದ ಆಲೂಗಡ್ಡೆಯನ್ನು ಮ್ಯಾಶ್ ಮಾಡಿ ಸೇರಿಸಿ. ನಂತರ ಕೆಂಪು ಮೆಣಸಿನ ಪುಡಿ, ಧನಿಯಾ ಪುಡಿ, ಗರಂ ಮಸಾಲა, ಉಪ್ಪು ಹಾಕಿ ಚೆನ್ನಾಗಿ ಕಲಸಿ ಕೊತ್ತಂಬರಿ ಸೊಪ್ಪು ಸೇರಿಸಿ ತಣಿಯಲು ಬಿಡಿ.
ಹಿಟ್ಟನ್ನು ತೆಳುವಾಗಿ ದೊಡ್ಡ ಚಪಾತಿಯಾಗ ಲಟ್ಟಿಸಿ. ಅದರ ಮೇಲೆ ತಯಾರಿಸಿದ ಹೂರಣ ಹಚ್ಚಿ.
ಈಗ ನಿಧಾನವಾಗಿ ರೋಲ್ ಮಾಡಿ ಉದ್ದವಾದ ಸಿಲಿಂಡರ್ ಆಕಾರಕ್ಕೆ ತರಬೇಕು. ಈಗ ಚೂರಿಯಿಂದ 1 ಇಂಚಿನ ತುಂಡುಗಳಂತೆ ಕತ್ತರಿಸಿ. ಕಾದ ಎಣ್ಣೆಯಲ್ಲಿ ಈ ಪಿನ್ ವೀಲ್ ತುಂಡುಗಳನ್ನು ಮಧ್ಯಮ ತಾಪಮಾನದಲ್ಲಿ ಬಣ್ಣ ಬದಲಾದವರೆಗೆ ಫ್ರೈ ಮಾಡಿ.

