ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಿಟನ್ನ ರಾಣಿ ಎಲಿಜಬೆತ್ II ನಿಧನರಾಗಿದ್ದಾರೆ.
96 ವರ್ಷ ಪ್ರಾಯದ ರಾಣಿ, ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದರು.
ಬ್ರಿಟನ್ನ್ನು ದೀರ್ಘಾವಧಿ ಆಳಿದ ರಾಣಿ ಎಂಬ ಹಿರಿಮೆಗೆ ರಾಣಿ ಎಲಿಜಬೆತ್ II ಅವರು ಪಾತ್ರರಾಗಿದ್ದಾರೆ. ಎರಡು ದಿನಗಳ ಹಿಂದಷ್ಟೇ ಬ್ರಿಟನಿನ ನೂತನ ಪ್ರಧಾನಿಯಾಗಿ ಲಿಝ್ ಟ್ರಸ್ ಅವರಿಗೆ ರಾಣಿ ಅಧಿಕಾರ ವಹಿಸಿದ್ದರು. ಇದೀಗ ಅವರ ನಿಧನ ಬಳಿಕ ಅವರ ಪುತ್ರ ಚಾರ್ಲ್ಸ್ ಬ್ರಿಟನಿನ ನೂತನ ದೊರೆಯಾಗಲಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎಲಿಜಬೆತ್ II ಬಲ್ ಮೊರಾಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬ್ರಿಟನ್ ರಾಣಿಯ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವ ನಾಯಕರು ಶೋಕ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ