ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಿಟನ್ ರಾಣಿ ಎಲಿಜಬೆತ್ II ನಿಧನದ ಬೆನ್ನಿಗೇ ಬ್ರಿಟನ್ ರಾಜನಾಗಿ ಪುತ್ರ ಚಾರ್ಲ್ಸ್ ಗದ್ದುಗೆ ಏರಲಿದ್ದಾರೆ.
ವೇಲ್ಸ್‌ನ ಮಾಜಿ ಪ್ರಿನ್ಸ್ ಚಾರ್ಲ್ಸ್ ಅವರೇ ಸ್ವತಃ ರಾಣಿಯ ನಿಧನವನ್ನು ಘೋಷಣೆ ಮಾಡಿದ್ದಾರೆ. ಈ ನಡುವೆ ’ರಾಣಿ ಇಂದು ಮಧ್ಯಾಹ್ನ ಬಾಲ್ಮೋರಲ್‌ನಲ್ಲಿ ನೆಮ್ಮದಿಯಿಂದ ನಿಧನರಾಗಿದ್ದಾರೆ. ರಾಜ ಮತ್ತು ರಾಣಿ ಪತ್ನಿ ಇಂದು ಸಂಜೆ ಬಾಲ್ಮೋರಲ್‌ನಲ್ಲಿ ಉಳಿಯುತ್ತಾರೆ ಮತ್ತು ನಾಳೆ ಲಂಡನ್‌ಗೆ ಹಿಂತಿರುಗುತ್ತಾರೆ’ ಎಂದು ರಾಜಮನೆತನವು ಟ್ವೀಟ್ ಮಾಡಿದೆ.
ರಾಣಿ ಎಲಿಜಬೆತ್ II ಬ್ರಿಟನ್ ಕಾಲಮಾನ ಸಂಜೆ 6.30ರ ವೇಳೆಗೆ ನಿಧನರಾಗಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ