ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಮಾಜಿ ಸ್ಪರ್ಧಿಯ ಮನೆಯಲ್ಲಿ ಬೆಂಕಿ (Fire) ಅವಘಡ ಸಂಭವಿಸಿದೆ. ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಶಿವ್ ಠಾಕ್ರೆಯ ಗುರುಗಾಂವ್ ಮನೆ ಬೆಂಕಿಗೆ ಆಹುತಿಯಾಗಿದೆ. ಮನೆಯ ಪಿಠೋಪಕರಣ, ವಸ್ತಗಳು ಸಂಪೂರ್ಣ ನಾಶವಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿರುವ ಘಟನ ಮುಂಬೈನ ಗೋರೇಗಾಂವ್‌ನಲ್ಲಿ ನಡೆದಿದೆ.
ಮನೆಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಲಾಗಿದೆ. ಹೀಗಾಗಿ ತಕ್ಷಣವೇ ಅಗ್ನಿಶಾಮಕ ದಳ ಶಿವ್ ಠಾಕ್ರೆ ಮನೆಯತ್ತ ಆಗಮಿಸಿದೆ.
ಅದೃಷ್ಠವಶಾತ್ ಶಿವ್ ಠಾಕ್ರೆ ಹಾಗೂ ಆತನ ಕುಟುಂಬಸ್ಥರಿಗೆ ಯಾವುದೇ ಹಾನಿಯಾಗಿಲ್ಲ. ಘಟನೆಯಲ್ಲಿ ಯಾವುದೇ ರೀತಿ ಪ್ರಾಣಾಪಾಯ ಸಂಭವಿಸಿಲ್ಲ. ಇತ್ತ ಅಕ್ಕ ಪಕ್ಕದ ಮನೆಯವರಿಗೂ ಸುರಕ್ಷಿತವಾಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಎಲ್ಲರೂ ಅಪಾರ್ಟ್‌ಮೆಂಟ್‌ನಿಂದ ಕೆಳಕ್ಕೆ ಬಂದಿದ್ದಾರೆ.
ಘಟನ ಕುರಿತು ಶಿವ್ ಠಾಕ್ರೆ ಸ್ಪಷ್ಟನೆ ನೀಡಿದ್ದಾರೆ. ಇಂದು ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ದುರಂತದಲ್ಲಿ ಮನೆ ಸುಟ್ಟು ಹೋಗಿದೆ. ಆದರೆ ಅದೃಷ್ಠವಶಾತ್ ಯಾರಿಗೂ ಹಾನಿಯಾಗಿಲ್ಲ. ಎಲ್ಲರು ಸುರಕ್ಷಿತವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇತ್ತ ಹಲವು ಫಾಲೋವರ್ಸ್ ಹಾಗೂ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

