September 27, 2026
Sunday, September 27, 2026
spot_img

CINE | ರಶ್ಮಿಕಾ-ವಿಜಯ್‌ ಸಂಗೀತ್‌ ಕಾರ್ಯಕ್ರಮದ ಮ್ಯಾಜಿಕಲ್‌ ಫೋಟೊಸ್‌ ರಿವೀಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆಯ ಫೋಟೊಗಳು ಇನ್ನೂ ಟ್ರೆಂಡಿಂಗ್‌ನಲ್ಲಿಯೇ ಇದೆ. ಇದೇ ಸಮಯದಲ್ಲಿ ಜೋಡಿ ಸಂಗೀತ್‌ ಕಾರ್ಯಕ್ರಮದ ಫೋಟೊಗಳನ್ನು ಅಪ್‌ಲೋಡ್‌ ಮಾಡಿದ್ದಾರೆ.

ಪ್ರೀತಿ, ನಗುವಿನಿಂದ ತುಂಬಿದ ರಾತ್ರಿ ಅದಾಗಿತ್ತು. ಎಲ್ಲೆಡೆ ಮ್ಯೂಸಿಕ್‌, ಮಿಂಚು, ಡ್ಯಾನ್ಸ್‌ ತುಂಬಿತ್ತು. ಇಷ್ಟೊಂದು ಎಂಜಾಯ್‌ ಹಿಂದೆಂದೂ ಮಾಡಿಲ್ಲ. ವಿಜು ಹಾಗೂ ನಾನು ಇಬ್ಬರೂ ಒಬ್ಬರನೊಬ್ಬರು ಸರ್ಪ್ರೈಸ್‌ ಮಾಡುವಲ್ಲಿ ಬ್ಯುಸಿಯಾಗಿದ್ದೆವು.

ಫ್ಯಾಮಿಲಿ ಕೂಡ ನಮಗೆ ಸರ್ಪ್ರೈಸ್‌ ನೀಡಿದ್ರು. ನಮ್ಮ ಕುಟುಂಬಗಳು ಈ ರೀತಿ ಬೆರೆತು ಎಂಜಾಯ್‌ ಮಾಡಿದ್ದು ನೋಡಿ ಖುಷಿಯಾಯ್ತು. ನಾನು ವಿಜಯ್‌ ಒಂದಾಗಿ ಡ್ಯಾನ್ಸ್‌ ಮಾಡಿದ್ವಿ. ಈ ದಿನ ಅವಿಸ್ಮರಣೀಯ ಎಂದು ರಶ್ಮಿಕಾ ಪೋಸ್ಟ್‌ ಮಾಡಿದ್ದಾರೆ.

ಟಾಲಿವುಡ್‌ನ ಪ್ರೀತಿಯ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ಈ ಇಬ್ಬರು ಮದುವೆ ಆಗಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದ ಐಟಿಸಿ ಹೋಟೆಲ್‌ನಲ್ಲಿ ಅವರ ವಿವಾಹ ಅದ್ಧೂರಿಯಾಗಿ ನಡೆದಿದೆ. 

Must Read