July 13, 2026
Monday, July 13, 2026
spot_img

ಕಾಲ್ತುಳಿತದಿಂದ 11 ಮಂದಿ ಸಾವಿಗೆ ಆರ್‌ಸಿಬಿಯೇ ನೇರ ಹೊಣೆ: ಸಿಐಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ಶೀಟ್ ಸಲ್ಲಿಕೆಗೆ ಸಿಐಡಿ ತಯಾರಿ ಮಾಡಿಕೊಂಡಿದೆ. 11 ಮಂದಿ ಸಾವಿಗೆ ಆರ್‌ಸಿಬಿಯೇ ನೇರ ಹೊಣೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ತನಿಖೆ ಮುಗಿಸಿ ಚಾರ್ಜ್‌ಶೀಟ್‌ ಸಲ್ಲಿಕೆಗೆ ಸಿಐಡಿ ತಯಾರಿಯಲ್ಲಿದೆ. ತನಿಖೆ ವೇಳೆ ಆರ್‌ಸಿಬಿ, ಡಿಎನ್‌ಎ, ಕೆಎಸ್‌ಸಿಎ ವಿರುದ್ಧ ಹಲವು ಸಾಕ್ಷ್ಯಗಳು ಸಿಕ್ಕಿವೆ. ನ್ಯಾಯಾಲಯಕ್ಕೆ 2,200 ಕ್ಕೂ ಪುಟಗಳ ಚಾರ್ಜ್‌ಶೀಟ್‌ ರೆಡಿಯಿದೆ. ಆರ್‌ಸಿಬಿ ಜೊತೆ ಕೆಎಸ್‌ಸಿಎ, ಡಿಎನ್‌ಎ ನೇರ ಹೊಣೆ ಅನ್ನೋದು ತನಿಖೆ ವೇಳೆ ಬಯಲಾಗಿದೆ. ಚಾರ್ಜ್‌ಶೀಟ್‌ನಲ್ಲಿ ಮೂರು ಸಂಸ್ಥೆಗಳನ್ನ ಸಿಐಡಿ ನೇರ ಹೊಣೆ ಮಾಡಿದೆ. ಸರಿಯಾದ ಪ್ಲಾನ್ ಇಲ್ಲದೆಯೇ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ಲ್ಯಾನ್‌ ಸರಿಯಾಗಿ ಮಾಡಿಲ್ಲ ಅನ್ನೋದು ತನಿಖೆ ವೇಳೆ ಪತ್ತೆಯಾಗಿದೆ.

ಆರ್‌ಸಿಬಿ ಟಿಕೆಟ್ ಬಗ್ಗೆ ಗೊಂದಲ ಹುಟ್ಟಿಸಿತ್ತು. ಇದು ಘಟನೆಗೆ ಮೊದಲ ಕಾರಣ ಅನ್ನೋದು ಬಯಲಾಗಿದೆ. ಅಲ್ಲದೇ ಡಿಎನ್‌ಎ ಕಡೆಯಿಂದ ಯಾವುದೇ ಸೆಕ್ಯುರಿಟಿ ಪ್ಲಾನ್ ಇರಲಿಲ್ಲ. ಖಾಸಗಿ ಸೆಕ್ಯುರಿಟಿ ಏಜೆನ್ಸಿ ಬಳಕೆಯಲ್ಲಿ ವಿಫಲವಾಗಿದೆ. ಪೊಲೀಸರ ಜೊತೆ ಕೂಡ ಸರಿಯಾದ ಮಾತುಕತೆ ನಡೆಸದೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಸಿಐಡಿ ಉಲ್ಲೇಖಿಸಿದೆ. 

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !