October 8, 2026
Thursday, October 8, 2026
spot_img

ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ‘ಸುಪ್ರೀಂ’ ತಡೆ: ತಮಿಳುನಾಡಿನಲ್ಲಿ ಗೋಹ*ತ್ಯೆ ನಿಷೇಧ ಗೊಂದಲಕ್ಕೆ ತೆರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನಲ್ಲಿ ಗೋಹತ್ಯೆ ಕುರಿತ ಮದ್ರಾಸ್ ಹೈಕೋರ್ಟ್‌ನ ಸಂಪೂರ್ಣ ನಿಷೇಧ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ. ಇದರೊಂದಿಗೆ ರಾಜ್ಯದಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಕಾನೂನು ನಿಯಮಗಳೇ ಸದ್ಯ ಮುಂದುವರಿಯಲಿವೆ.

ಏನಿದು ಆದೇಶ?

ತಮಿಳುನಾಡು ಸರ್ಕಾರದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಕಾನೂನು ಅನುಮತಿಸುವ ವ್ಯಾಪ್ತಿಯನ್ನು ಮೀರಿ ಸಂಪೂರ್ಣ ನಿಷೇಧ ಹೇರಲು ಸಾಧ್ಯವಿಲ್ಲ ಎಂಬ ವಾದವನ್ನು ನ್ಯಾಯಾಲಯ ಪರಿಗಣಿಸಿದೆ.

ಇದನ್ನೂ ಓದಿ:

ಯಾವ ನಿಯಮ ಮುಂದುವರಿಯಲಿದೆ?

ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ ನಿಷೇಧ ಯಥಾಸ್ಥಿತಿಯಲ್ಲೇ ಇರಲಿದೆ. ಆದರೆ, ಕಾನೂನಿನಲ್ಲಿ ಅನುಮತಿ ಇರುವ ಅಧಿಕೃತ ಸ್ಥಳಗಳಲ್ಲಿ ಮಾತ್ರ ನಿಗದಿತ ನಿಯಮಗಳಂತೆ ಪ್ರಾಣಿ ವಧೆಗೆ ಅವಕಾಶ ಮುಂದುವರಿಯಲಿದೆ.

Must Read