ದಿನಭವಿಷ್ಯ | ಇಂದು ದಿನವಿಡೀ ಹರ್ಷಚಿತ್ತರಾಗಿ ಇರುವಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ದಿನವಿಡೀ ಪರಿಶ್ರಮ. ನಿಮ್ಮ ಕಠಿಣ ದುಡಿಮೆಗೆ ಒಳ್ಳೆಯ ಪ್ರತಿಫಲವೂ ದೊರಕುವುದು. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಸಂಭವ. ವಾಗ್ವಾದ ತಪ್ಪಿಸಿ.

ವೃಷಭ
ಬಂಧುಗಳ ಜತೆ ವಾಗ್ವಾದಕ್ಕೆಡೆ ಮಾಡದಿರಿ. ಅದರಿಂದ ನಿಮ್ಮ ವರ್ಚಸ್ಸಿಗೇ  ಹಾನಿ. ಜೀವನಶೈಲಿ ಬದಲಿಸಿಕೊಳ್ಳಲು ಯೋಚಿಸಿ.

ಮಿಥುನ
ಇಂದು ಎಲ್ಲವೂ ನಿಮಗೆ ಪೂರಕವಾಗಿ ಸಾಗಲಿದೆ. ಖಾಸಗಿ ಸಮಸ್ಯೆಯೊಂದು ನಿಮ್ಮಿಷ್ಟದಂತೆ ಪರಿಹಾರ ಕಾಣುವುದು. ಆರ್ಥಿಕ ಪರಿಸ್ಥಿತಿ ಚೇತರಿಕೆ. ಆತ್ಮೀಯ ಬಂಧು ಭೇಟಿ.

ಕಟಕ
ಪ್ರಮುಖ ಕೆಲಸಗಳನ್ನು ಅವಸರದಿಂದ ಪೂರೈಸಲು ಯತ್ನಿಸದಿರಿ. ಅದರಿಂದ ನಿಮಗೆ ಪ್ರತಿಕೂಲ ಪರಿಣಾಮ  ಆದೀತು. ದೈಹಿಕ ಶ್ರಮದಿಂದ ಸುಸ್ತು.

ಸಿಂಹ
ಸೂಕ್ಷ್ಮಸಂವೇದಿಯಾಗಿ ಇಂದು ವರ್ತಿಸುತ್ತೀರಿ. ಕೌಟುಂಬಿಕ ಬೆಳವಣಿಗೆಯೊಂದು ಇದಕ್ಕೆ ಕಾರಣ. ಇತರರು ನಿಮ್ಮನ್ನು ಕಡೆಗಣಿಸಿದ ಭಾವನೆ ಕಾಡುವುದು.

ಕನ್ಯಾ
ವೃತ್ತಿಯಲ್ಲಿ ಫಲಪ್ರದ ದಿನ. ತೃಪ್ತಿಕರ ಸಾಧನೆ. ನಿಮ್ಮ ಮೇಲೆ ಕೆಲವು ವ್ಯಕ್ತಿಗಳು ಪ್ರಭಾವ ಬೀರುತ್ತಾರೆ. ಕೌಟುಂಬಿಕ ನೆಮ್ಮದಿ. ಆರ್ಥಿಕ ಲಾಭ ಸಿಗುವುದು.

ತುಲಾ
ಕಾರ್‍ಯದಲ್ಲಿ ತೊಡಕು. ನಿಮ್ಮ ನೈಪುಣ್ಯತೆ ಈ ತೊಡಕು ನಿವಾರಿಸಲು ಸಹಾಯ ನೀಡುವುದು. ಹಣಕಾಸು ವಿಷಯಕ್ಕೆ ಸಂಬಂಧಿಸಿ ಗೊಂದಲ ಸೃಷ್ಟಿಯಾದೀತು.

ವೃಶ್ಚಿಕ
ಇಂದು ದಿನವಿಡೀ ಹರ್ಷಚಿತ್ತರಾಗಿ ಇರು ವಿರಿ ಖಾಸಗಿ ಬದುಕಲ್ಲಿ ಬಯಸಿದ ವಿಷಯ ನೆರವೇರುವುದು. ಸಣ್ಣ ವಿಷಯಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.

ಧನು
ವಿವಾಹಿತರ ಮಧ್ಯೆ ಭಿನ್ನಾಭಿಪ್ರಾಯ. ಸಣ್ಣ ವಿಷಯ ಸಂಘರ್ಷಕ್ಕೆ ಕಾರಣವಾದೀತು. ತಾಳ್ಮೆಯಿಂದ ವರ್ತಿಸಿ. ಅತಿರೇಕದಿಂದ ಪ್ರತಿಕ್ರಿಯಿಸದಿರಿ.

ಮಕರ
ನಿಮ್ಮ ಸಂತೋಷದ ಮೂಲ ಕುಟುಂಬ. ಹಾಗಾಗಿ ಕುಟುಂಬದ ಏಳಿಗೆಗೆ ಆದ್ಯತೆ ಕೊಡಿ. ನಿಮ್ಮ ಹೊಣೆಯಿಂದ ಜಾರಿಕೊಳ್ಳಬೇಡಿ. ಆರೋಗ್ಯ ಸುಧಾರಣೆ.

ಕುಂಭ
ಹಳೆಯದನ್ನು ನೆನಪಿಸಿ ಕೊಂಡು ಕೊರಗಬೇಡಿ.ಬದಲಾವಣೆಗೆ ಒಗ್ಗಿ ಕೊಳ್ಳಿ. ಭಾವನಾತ್ಮಕ  ವಿಷಯವೊಂದು ಮನಸ್ಸು ಕದಡಬಹುದು.

ಮೀನ
ಸಹೋದ್ಯೋಗಿಗಳ ಜತೆ  ಸ್ನೇಹದ ಸೇತುವೆ ಕಟ್ಟಿ. ಅಧಿಕಾರ ಚಲಾವಣೆ ಫಲ ನೀಡದು. ಕುಟುಂಬದಲ್ಲಿ ವಾಗ್ವಾದ ನಡೆದೀತು. ಆರೋಗ್ಯ ಸ್ಥಿರ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!