ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಇತರೆ ಪದಾಧಿಕಾರಿಗಳ ಕೂಲಿಂಗ್ ಆಫ್ ಅವಧಿಗೆ ಸಂಬಂಧಿಸಿದಂತೆ ನಿಯಮಗಳ ತಿದ್ದುಪಡಿಗೆ ಇಂದು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಈ ಮೂಲಕ ಬಿಸಿಸಿಐಅಧ್ಯಕ್ಷರು ಸೇರಿದಂತೆ ಆಫೀಸ್ ಬೇರರ್ ನಿಯಮಗಳ ತಿದ್ದುಪಡಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠವು, ತನ್ನ ನಿಯಮಗಳನ್ನು ತಿದ್ದುಪಡಿ ಮಾಡಲು ಬಿಸಿಸಿಐಗೆ ಅನುಮತಿ ನೀಡಿದೆ.
‘ತಿದ್ದುಪಡಿಯು ಮೂಲ ಉದ್ದೇಶವನ್ನು ದುರ್ಬಲಗೊಳಿಸುವುದಿಲ್ಲ ಎಂದು ನಾವು ಪರಿಗಣಿಸಿದ್ದೇವೆ. ಪ್ರಸ್ತಾವಿತ ತಿದ್ದುಪಡಿಯನ್ನು ನಾವು ಒಪ್ಪಿಕೊಳ್ಳುತ್ತೇವೆ’ ಎಂದು ಹೇಳಿದರು.
‘ಬಿಸಿಸಿಐ ಪ್ರಸ್ತಾಪಿಸಿದ ತಿದ್ದುಪಡಿಯು ನಮ್ಮ ಮೂಲ ತೀರ್ಪಿನ ಸ್ಫೂರ್ತಿಯಿಂದ ವಿಚಲಿತವಾಗುವುದಿಲ್ಲ ಮತ್ತು ಅದನ್ನು ಸ್ವೀಕರಿಸಲಾಗಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಂದಹಾಗೇ ಇಂದು ಅಧ್ಯಕ್ಷ, ಕಾರ್ಯದರ್ಶಿ ಮತ್ತು ಇತರ ಪದಾಧಿಕಾರಿಗಳಿಗೆ ‘ಕೂಲಿಂಗ್ ಆಫ್’ ಅವಧಿಗೆ ಸಂಬಂಧಿಸಿದ ಬಿಸಿಸಿಐ ನಿಯಮಗಳನ್ನು ಬದಲಾಯಿಸುವ ವಿಷಯವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.