ಬೆಳಗಿನ ಉಪಾಹಾರಕ್ಕಾಗಲಿ, ಮಧ್ಯಾಹ್ನ ಊಟಕ್ಕಾಗಲಿ ಸುಲಭದಲ್ಲೇ ರುಚಿ ತುಂಬುವ ಒಂದು ಡಿಶ್ ಎಂದರೆ ಕಾರ್ನ್ ರೈಸ್. ಕೆಲವೇ ಪದಾರ್ಥಗಳಲ್ಲಿ ತಯಾರಿಸಬಹುದಾದ ಈ ಕಾರ್ನ್ ರೈಸ್ ಮಕ್ಕಳಿಗೂ ದೊಡ್ಡವರಿಗೂ ಇಷ್ಟವಾಗುವ ರುಚಿಕರ ತಿಂಡಿ.
ಬೇಕಾಗುವ ಪದಾರ್ಥಗಳು:
ಅನ್ನ – 1 ಕಪ್
ಸಿಹಿ ಕಾರ್ನ್ – 1 ಕಪ್
ಈರುಳ್ಳಿ – 1
ಹಸಿಮೆಣಸಿನಕಾಯಿ – 2
ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಅರಶಿನ ಪುಡಿ – ¼ ಟೀ ಸ್ಪೂನ್
ಮೆಣಸಿನ ಪುಡಿ – ½ ಟೀ ಸ್ಪೂನ್
ಸಾಂಬಾರ್ ಪುಡಿ – 1 ಟೀ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ – 2 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಜೀರಿಗೆ, ಕರಿಬೇವು, ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಸುವಾಸನೆ ಬರುವವರೆಗೆ ಹುರಿಯಿರಿ. ಈಗ ಬೇಯಿಸಿದ ಸಿಹಿ ಕಾರ್ನ್ ಹಾಕಿ 2–3 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿ.
ಅರಶಿನ ಪುಡಿ, ಮೆಣಸಿನ ಪುಡಿ ಮತ್ತು ಸಾಂಬಾರ್ ಪುಡಿ ಹಾಕಿ ಚೆನ್ನಾಗಿ ಕಲಸಿ ಸ್ವಲ್ಪ ಕಾಲ ಹುರಿಯಿರಿ. ಇದಕ್ಕೆ ಬೇಯಿಸಿದ ಅನ್ನ ಸೇರಿಸಿ, ಉಪ್ಪು ಹಾಕಿ ನಜೂಕಾಗಿ ಮಿಕ್ಸ್ ಮಾಡಿ. 2 ನಿಮಿಷ ಮುಚ್ಚಿ ಬೇಯಿಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ.

