ಮೇಷ.
ನಿರೀಕ್ಷೆಗಿಂತ ಹೆಚ್ಚು ಆದಾಯ ಅರ್ಜಿಸುವಿರಿ. ದಂಪತಿ ನಡುವಿನ ಭಿನ್ನಮತ ಶಮನ. ಚರ್ಮದ ಸೋಂಕು ಉಂಟಾದೀತು, ಎಚ್ಚರ.
ವೃಷಭ
ನಿಮ್ಮ ಅಭಿಪ್ರಾಯ ಒಪ್ಪದವರ ಜತೆ ವ್ಯವಹಾರ ನಡೆಸುವಾಗ ಎಚ್ಚರ ವಹಿಸಿ. ಹೊಟ್ಟೆ ನೋವು ಬಾಽಸಬಹುದು. ಕೊಟ್ಟ ಸಾಲ ಸಿಗಲಿದೆ.
ಮಿಥುನ
ಕೆಲಸದ ಒತ್ತಡ ಕಡಿಮೆ. ನಿರಾಳವಾಗಿರಲು ಅವಕಾಶ. ದಂಪತಿ ಮಧ್ಯೆ ಸಾಮರಸ್ಯ ಹೆಚ್ಚಳ. ಏಕಾಂಗಿಗಳಿಗೆ ಸೂಕ್ತ ಸಂಗಾತಿ ಸಿಗಬಹುದು.
ಕಟಕ
ವ್ಯವಹಾರದಲ್ಲಿ ಅಡ್ಡಿ ಒದಗಬಹುದು. ಧನವ್ಯಯ ಹೆಚ್ಚು. ದಂಪತಿ ಮಧ್ಯೆ ಸಣ್ಣ ವಿಷಯಕ್ಕೆ ಕಲಹ. ಹೊಂದಾಣಿಕೆಯ ಮಾರ್ಗ ಒಳ್ಳೆಯದು.
ಸಿಂಹ
ಉತ್ಸಾಹಪೂರ್ಣ ದಿನ. ನೀವು ಬಯಸಿದ ಮಾಹಿತಿ ಇಂದು ದೊರಕಲಿದೆ. ಉದ್ಯೋಗ ಹುಡುಕಾಟಕ್ಕೆ ಸಕಾರಾತ್ಮಕ -ಲ ಸಿಗುವುದು.
ಕನ್ಯಾ
ಹೋದ್ಯೋಗಿ ಜತೆ ಏಗುವುದು ಕಷ್ಟವಾದೀತು. ಅವರ ನಿಲುವು ನಿಮಗೆ ಸರಿ ಕಾಣದು. ಅನಿರೀಕ್ಷಿತ ಖರ್ಚು ಒದಗಲಿದೆ. ವಿದ್ಯಾರ್ಥಿಗಳಿಗೆ ಯಶಸ್ಸು.
ತುಲಾ
ನಿಮ್ಮ ಮತ್ತು ಇತರರ ಕುರಿತಂತೆ ನೀವು ತಾಳ್ಮೆ ವಹಿಸಬೇಕು. ವಿವಿಧ ಗೊಂದಲದ ಪರಿಸ್ಥಿತಿ ಇಂದು ಉದ್ಭವಿಸಬಹುದು. ಸಮತೋಲನ ಕಾದುಕೊಳ್ಳಿ.
ವೃಶ್ಚಿಕ
ವ್ಯವಹಾರವು ಸುಗಮವಾಗಿ ಸಾಗದು. ಅಡೆತಡೆ ಒದಗೀತು. ಸಂಗಾತಿ ಜತೆ ವಾಕ್ಸಮರ ತಪ್ಪಿಸಿ. ವಾಹನ ಚಾಲನೆ ಯಲ್ಲಿ ಎಚ್ಚರ ವಹಿಸಿ.
ಧನು
ಆಪ್ತರು ನಿಮ್ಮಿಂದ ಬಹಳಷ್ಟು ನಿರೀಕ್ಷಿಸುವರು. ಆ ನಿರೀಕ್ಷೆ ತಲುಪುವುದು ನಿಮ್ಮಿಂದಾಗದು. ಬೇಸರಪಡದಿರಿ. ಆತ್ಮವಿಶ್ವಾಸ ಕುಂದದಿರಲಿ.
ಮಕರ
ಆನಂದದ ದಿನ. ಯಶ ಸಾಽಸುವಿರಿ. ಕೆಲವರು ನಿಮಗೆ ತಲೆಬಾಗುವ ಪ್ರಸಂಗ ಬರಲಿದೆ. ಅದು ನಿಮ್ಮ ಸಾಮರ್ಥ್ಯಕ್ಕೆ ಸಾಕ್ಷಿ.
ಕುಂಭ
ಬಹುದಿನದ ಬಳಿಕ ಒತ್ತಡ ಕಡಿಮೆ, ನಿರಾಳತೆ. ಕೌಟುಂಬಿಕ ಪರಿಸರದಲ್ಲಿ ಸಂತೋಷ. ವೃದ್ಧರಿಗೆ ತುಸು ಸಮಸ್ಯೆ ಕಾಣಿಸಬಹುದು.
ಮೀನ
ನೀವು ಯೋಜಿಸಿದ ಕಾರ್ಯ ಕೂಡಲೇ ಆಗದು. ವಿಳಂಬವಾದೀತು. ನಿಮ್ಮ ಸುತ್ತಲಿನ ಬೆಳವಣಿಗೆ ಮನಸ್ಸಿನ ನೆಮ್ಮದಿ ಕೆಡಿಸಬಹುದು.
ದಿನಭವಿಷ್ಯ: ಇಂದು ನೀವಂದುಕೊಂಡದ್ದಕ್ಕಿಂತ ಹೆಚ್ಚು ಆದಾಯ ಸಿಗಲಿದೆ

