ದಿನಭವಿಷ್ಯ
ಮೇಷ
ನಿಮ್ಮ ಮಹತ್ವಾಕಾಂಕ್ಷೆ ಈಡೇರಿಸಿಕೊಳ್ಳಲು ಯೋಜನೆ ಹಾಕುವಿರಿ. ಆದರೆ ಕೈಲಾಗುವುದನ್ನೆ ಸಾಸಲು ಯತ್ನಿಸಿ. ಇಲ್ಲದಿದ್ದರೆ ನಿರಾಶೆ ಉಂಟಾದೀತು.
ವೃಷಭ
ಆರ್ಥಿಕ ಹೊಣೆಗಾರಿಕೆ ಗಳನ್ನು ಇಂದು ನಿಭಾಯಿಸ ಬೇಕಾಗುವುದು. ಖರ್ಚು ಹೆಚ್ಚಳ ಚಿಂತೆಗೆ ಕಾರಣವಾಗುತ್ತದೆ. ಕೌಟುಂಬಿಕ ಮನಸ್ತಾಪ.
ಮಿಥುನ
ಪ್ರೀತಿಪಾತ್ರರೊಂದಿಗೆ ಹೆಚ್ಚು ಕಾಲ ಕಳೆಯುವ ಅವಕಾಶ ದೊರಕಲಿದೆ. ಉದ್ಯೋಗದ ಹೊಣೆ ಗಾರಿಕೆ ಮರೆಯದಿರಿ. ಕೌಟುಂಬಿಕ ಸಾಮರಸ್ಯ.
ಕಟಕ
ಉದ್ಯಮದಲ್ಲಿ ಹಿನ್ನಡೆ. ಆರ್ಥಿಕ ನಷ್ಟ ಉಂಟಾಗಬಹುದು. ಹಣ ಹೂಡಿಕೆಯಲ್ಲಿ ಎಚ್ಚರ ಅವಶ್ಯ. ಕೌಟುಂಬಿಕ ಒತ್ತಡಗಳು ಹೆಚ್ಚು.
ಸಿಂಹ
ಕೆಲವರ ವರ್ತನೆ ನಿಮಗಿಂದು ಅಸಹನೆ ಮೂಡಿಸಬಹುದು. ವಾಗ್ವಾದಕ್ಕಿಂತ ಅವರಿಂದ ದೂರ ಇರುವುದೇ ಲೇಸು. ಹಣಕಾಸು ಕೊರತೆ.
ಕನ್ಯಾ
ಸಮಸ್ಯೆಗಳಿಂದ ಓಡಿ ಹೋಗದಿರಿ. ಅವನ್ನು ದಿಟ್ಟವಾಗಿ ಎದುರಿಸಿ. ಯಶಸ್ಸು ಗಳಿಸುವಿರಿ. ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ಉಂಟಾಗಬಹುದು.
ತುಲಾ
ಸಂಧಾನಕಾರನ ಪಾತ್ರ ವಹಿಸಬೇಕಾದೀತು. ಬಿಕ್ಕಟ್ಟು ಶಮನ ಗೊಳಿಸಲು ನೀವು ನೆರವಾಗು
ವಿರಿ. ಇದು ನಿಮಗೆ ವಿರೋಗಳನ್ನೂ ಸೃಷ್ಟಿಸಬಹುದು.
ವೃಶ್ಚಿಕ
ಕೆಲಸದ ಒತ್ತಡ ಹೆಚ್ಚು. ಹೊಸ ಹೊಣೆಗಾರಿಕೆ ಹೆಗಲೇರುವುದು. ಕೆಲಸದಲ್ಲಿ ಕೆಲವು ಅಡೆತಡೆ ಎದುರಿಸುವಿರಿ. ಸ್ಥೈರ್ಯ ಕಳಕೊಳ್ಳ ದಿರುವುದು ಮುಖ್ಯ.
ಧನು
ಹಲವಾರು ಏರಿಳಿತ ಕಾಣುವಿರಿ ಇಂದು. ಭಾವನಾತ್ಮಕ ಸಂಘರ್ಷದಲ್ಲಿ ತೊಳಲಾಡುವಿರಿ. ದೇವರ ಪ್ರಾರ್ಥನೆ ನೆಮ್ಮದಿ ತಂದೀತು.
ಮಕರ
ಇತರರ ಪ್ರಮಾದವನ್ನು ನೀವು ಸರಿಪಡಿಸಲು ಹೊರಡಬೇಕಾದೀತು. ಅವರ ತಪ್ಪಿನ ಫಲ ನೀವು ಅನುಭವಿಸುವಿರಿ. ಆರ್ಥಿಕ ಹೊರೆ ಹೆಚ್ಚಳ. ಕೌಟುಂಬಿಕ ಅಶಾಂತಿ.
ಕುಂಭ
ಸಂತೋಷದ ಬೆಳವಣಿಗೆ. ಇತರರಲ್ಲಿ ಹಂಚಿಕೊಳ್ಳಲು ಹಿಂಜರಿಯಬೇಕಿಲ್ಲ. ಉಪಕಾರ ಪಡೆದವರು ನಿಮಗೆ ಪ್ರತ್ಯುಪಕಾರ ಮಾಡುತ್ತಾರೆ.
ಮೀನ
ಇತರರನ್ನು ಇಕ್ಕಟ್ಟಿಗೆ ಸಿಲುಕಿಸುವ ನಿಮ್ಮ ತಂತ್ರ ನಿಮಗೇ ತಿರುಗುಬಾಣ ಆದೀತು. ಕೆಟ್ಟ ಯೋಚನೆಗಳನ್ನು ಬಿಟ್ಟುಬಿಡಿ.