ಅಲೋವೆರಾ ಯುಗಯುಗಗಳಿಂದಲೂ ಔಷಧೀಯ ಮೌಲ್ಯಕ್ಕಾಗಿ ಪ್ರಸಿದ್ಧ. ಇಂದು ಮಾರುಕಟ್ಟೆಯಲ್ಲಿ ನೂರಾರು ಕೂದಲು ಉತ್ಪನ್ನಗಳಿದ್ದರೂ, ಪ್ರಕೃತಿ ನೀಡಿರುವ ಈ ಜನಪ್ರಿಯ ಸಸ್ಯದ ಜೆಲ್ ಕೂದಲಿಗೆ ನೀಡುವ ಪೋಷಣೆ ಯಾವುದೇ ಕ್ರೀಮ್‌ಗೂ ಸಾಟಿಯಲ್ಲ. ಡ್ರೈ, ಉದುರುವ, ನಿರ್ಜಿವ ಕೂದಲನ್ನು ಪುನಃ ಜೀವಂತಗೊಳಿಸಲು ಅಲೋವೆರಾ ಅತ್ಯಂತ ಸುಲಭ ಹಾಗೂ ಸುರಕ್ಷಿತ ಆಯ್ಕೆ.
- ಆಳವಾದ ತೇವಾಂಶ: ಕೂದಲನ್ನು ಮೃದುಗೊಳಿಸಿ ಒಣಗುವುದನ್ನು ಕಡಿಮೆ ಮಾಡುತ್ತದೆ.
- ಬೇರು ಬಲಪಡಿಸುವುದು: ಕೂದಲ ಬೇರುಗಳಿಗೆ ಪೋಷಕಾಂಶ ನೀಡಿ ಕೂದಲು ಉದುರುವುದನ್ನು ತಡೆಯುತ್ತದೆ.
- ಸ್ಮೂತ್ ಫಿನಿಷ್: ನಿಯಮಿತ ಬಳಕೆ ಕೂದಲಿಗೆ ನೈಸರ್ಗಿಕ ಹೊಳಪು ನೀಡುತ್ತದೆ.
- ಬೆಳವಣಿಗೆ ವೇಗ: ತಲೆಹೊಟ್ಟು ಕಡಿಮೆ ಮಾಡಿ ರಕ್ತಸಂಚಾರ ಹೆಚ್ಚಿಸಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಅಲೋವೆರಾವನ್ನು ಬಳಸುವ ಸರಿಯಾದ ವಿಧಾನ
ತಾಜಾ ಅಲೋವೆರಾ ಎಲೆಯನ್ನು ತೆಗೆದು, ಸಿಪ್ಪೆ ತೆಗೆಯಿರಿ ಮತ್ತು ಒಳಗಿನ ಜೆಲ್ ಅನ್ನು ಚಮಚದಿಂದ ತೆಗೆದುಕೊಂಡು ಮಿಕ್ಸರ್‌ನಲ್ಲಿ ಪೇಸ್ಟ್ ಮಾಡಿ. ಸ್ವಲ್ಪ ಒದ್ದೆ ಇರುವ ಕೂದಲಿನ ಬೇರುಗಳಿಂದ ತುದಿಗಳವರೆಗೆ ಈ ಪೇಸ್ಟ್ ಅನ್ನು ಹಚ್ಚಿ. ಅರ್ಧ ಗಂಟೆಯಿಂದ ಒಂದು ಗಂಟೆಯವರೆಗೆ ಬಿಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ನಂತರ ಸೌಮ್ಯ ಶಾಂಪೂ ಬಳಸಿ ತೊಳೆಯಿರಿ.
ವಾರಕ್ಕೆ ಎರಡು ಬಾರಿ ಈ ಜೆಲ್ ಬಳಸುವುದರಿಂದ ಒಣಗಿದ, ಜೀವರಹಿತ ಕೂದಲು ಮೃದುವಾಗಿ ಹೊಳೆಯಲು ಶುರುವಾಗುತ್ತದೆ. ನೈಸರ್ಗಿಕವಾಗಿ ಕೂದಲನ್ನು ಬಲಪಡಿಸಲು, ಬೆಳವಣಿಗೆ ಹೆಚ್ಚಿಸಲು ಅಲೋವೆರಾ ನಿಜವಾಗಿಯೂ ಕೂದಲಿನ ಆರೋಗ್ಯಕ್ಕೆ ವರದಾನ.

