Saturday, November 22, 2025

ನಟಿಯರ ವಿರುದ್ಧ ಅಶ್ಲೀಲ ಹಾಡು ರಚಿಸುತ್ತಿದ್ದ ವ್ಯಕ್ತಿ ಮೇಲೆ ಕೇಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಗ್‌ ಬಾಸ್‌ ಸ್ಪರ್ಧಿ ರಕ್ಷಿತಾ ಶೆಟ್ಟಿ, ನಿವೇದಿತಾ ಗೌಡ , ಸೋನು ಗೌಡ ಸೇರಿದಂತೆ ಅನೇಕರ ವಿರುದ್ಧ ಅಶ್ಲೀಲವಾಗಿ ಹಾಡು ಬರೆದು ಹರಿಯ ಬಿಡುತ್ತಿದ್ದ ಭೂಪನ ಮೇಲೆ ಕೇಸ್‌ ದಾಖಲಾಗಿದೆ.

jewinson ಎಂಬಾತ ಅಶ್ಲೀಲವಾಗಿ ಹಾಡು ಬರೆದು ಯೂಟ್ಯೂಬ್‌, ಇನ್‌ಸ್ಟಾದಲ್ಲಿ ವಿಡಿಯೋ ಅಪ್ಲೋಡ್‌ ಮಾಡುತ್ತಿದ್ದ. ಈತನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿದ ರಾಜ್ಯ ಮಹಿಳಾ ಆಯೋಗ ಪ್ರಕರಣವನ್ನು ಸೈಬರ್‌ ತಂಡಕ್ಕೆ ವರ್ಗಾವಣೆ ಮಾಡಿ ಖಾತೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದೆ.

ಈತ ರಕ್ಷಿತಾ ಶೆಟ್ಟಿ, ನಿವೇದಿತಾ ಗೌಡ, ಸೋನುಗೌಡ ಸೇರಿದಂತೆ ಹಲವರು ಅಪ್ಲೋಡ್‌ ಮಾಡಿದ ವಿಡಿಯೋವನ್ನು ಡೌನ್‌ಲೋಡ್‌ ಮಾಡಿ ಅಶ್ಲೀಲ ಸಾಹಿತ್ಯವನ್ನು ರಚಿಸಿ ತನ್ನ ಖಾತೆಯಲ್ಲಿ ಅಪ್ಲೋಡ್‌ ಮಾಡುತ್ತಿದ್ದ. ಈ ವಿಡಿಯೋಗಳು ಲಕ್ಷಾಂತರ ವ್ಯೂ ಪಡೆಯುತ್ತಿದ್ದವು. ನೆಟ್ಟಿಗರು ಈತನ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ನೀಡಿದ ಬೆನ್ನಲ್ಲೇ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.

error: Content is protected !!