ಮಕ್ಕಳಿರುವ ಮನೆಯಲ್ಲಿ ಸಾಮಾನ್ಯವಾಗಿ ಕಾಣುವ ದೊಡ್ಡ ಸಮಸ್ಯೆಯೆಂದರೆ “ಮಗು ರಾತ್ರಿ ಸರಿಯಾಗಿ ನಿದ್ರೆ ಮಾಡಲ್ಲ”. ಪೋಷಕರು ಎಷ್ಟೇ ಆಟಾಡಿಸಲಿ, ಕತೆ ಹೇಳಲಿ ಅಥವಾ ಮಲಗಿಸಲು ಪ್ರಯತ್ನಿಸಿದರೂ ಕೆಲ ಮಕ್ಕಳಿಗೆ ನಿದ್ರೆ ಬರೋದೇ ಇಲ್ಲ. ಆದರೆ ಈ ಸಮಸ್ಯೆ ಆಯಾಸದ ಕೊರತೆಯಲ್ಲ, “ಸಂಜೆ ಅವರು ತಿನ್ನುವ ಆಹಾರದಲ್ಲೇ” ಉತ್ತರ ಅಡಗಿದೆ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಸಂಜೆ 4 ಗಂಟೆಯಿಂದ ಮಲಗುವ ತನಕದ ಆಹಾರ ಮಕ್ಕಳ ನಿದ್ರೆಗೆ ನೇರವಾಗಿ ಪರಿಣಾಮ ಬೀರುತ್ತದೆ.
- ಸಿಹಿ ಗೆಣಸು – ತುಪ್ಪ ಮಿಶ್ರಣ: ಸಿಹಿ ಗೆಣಸಿನಲ್ಲಿ ಇರುವ ವಿಟಮಿನ್ B6 ಮೆಲಟೋನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ತುಪ್ಪ ಮತ್ತು ದಾಲ್ಚಿನ್ನಿ ಸೇರಿಸಿದರೆ ಮಕ್ಕಳ ಕಿರಿಕಿರಿಯನ್ನು ಕಡಿಮೆ ಮಾಡಿ ಸುಲಭ ನಿದ್ರೆ ತರುತ್ತದೆ.
- ಓಟ್ಸ್ ಗಂಜಿ – ಕುಂಬಳಕಾಯಿ ಬೀಜ: ಓಟ್ಸ್ ಹಾಗೂ ಕುಂಬಳಕಾಯಿ ಬೀಜಗಳಲ್ಲಿ ಟ್ರಿಪ್ಟೊಫಾನ್ ಮತ್ತು ಮೆಗ್ನೀಸಿಯಮ್ ಹೆಚ್ಚಿದ್ದು ಸ್ನಾಯುಗಳನ್ನು ಸಡಿಲಗೊಳಿಸಿ ಬೇಗನೆ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
- ಬಾಳೆಹಣ್ಣು – ಬಾದಾಮಿ ಬಟರ್ : ಈ ಸಂಯೋಜನೆಯಲ್ಲಿ ಸಿರೊಟೋನಿನ್ ಹೆಚ್ಚಿಸುವ ಗುಣವಿದ್ದು ಮಗುವಿಗೆ ವಿಶ್ರಾಂತಿ ಹಾಗೂ ಸಂತೋಷದ ಭಾವನೆಯನ್ನು ನೀಡುತ್ತದೆ. ಇದು ಗಾಢ ನಿದ್ರೆಗೆ ಸಹಾಯಕ.
ಮಕ್ಕಳ ಸಂಜೆಯ ಆಹಾರದಲ್ಲಿನ ಸಣ್ಣ ಬದಲಾವಣೆಗಳು ಅವರ ನಿದ್ರೆಯ ಗುಣಮಟ್ಟ, ಮನಸ್ಥಿತಿ ಮತ್ತು ಶಕ್ತಿಯನ್ನು ಉತ್ತಮಗೊಳಿಸಬಹುದು. ಜಂಕ್ ಫುಡ್ ಬದಲು ಈ ಪೋಷಕಾಂಶಯುಕ್ತ ಆಹಾರಗಳನ್ನು ನೀಡುವುದೇ ಉತ್ತಮ ಪರಿಹಾರ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

