Friday, November 21, 2025

ನೇಪಾಳದಲ್ಲಿ ನಿಲ್ಲದ Gen-Z ಅಬ್ಬರ: ಸಿಮ್ರಾ ಪಟ್ಟಣ ಉದ್ವಿಗ್ನ; ಲಾಠಿಚಾರ್ಜ್, ಕರ್ಫ್ಯೂ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳದ ರಾಜಕೀಯ ವಾತಾವರಣ ಮತ್ತೊಮ್ಮೆ ಕಮರಿ ಬಿಟ್ಟಿದೆ. ಹೊಸ ಪೀಳಿಗೆಯ Gen- Z ಯುವಕರ ಗುಂಪು ಸಿಮ್ರಾ ಪಟ್ಟಣದಲ್ಲಿ ತೀವ್ರ ಪ್ರತಿಭಟನೆ ನಡೆಸಿದೆ. ಮಾಧೇಸಿ ಪ್ರದೇಶದ ಬಾರಾ ಜಿಲ್ಲೆಯ ಸಿಮ್ರಾ ಪಟ್ಟಣ ಭಾರೀ ರಾಜಕೀಯ ಗಲಭೆಗೆ ಸಾಕ್ಷಿಯಾಯಿತು. ಸಿಪಿಎನ್-ಯುಎಂಎಲ್ ಪಕ್ಷದ ‘ಯುವ ಜಾಗೃತಿ’ ರ‍್ಯಾಲಿಗೆ ಬಂದ ನಾಯಕರ ವಿರುದ್ಧ Gen- Z ಯುವಕರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಸ್ವಲ್ಪ ಸಮಯದಲ್ಲೇ ಹಿಂಸಾತ್ಮಕ ಸ್ವರೂಪ ಪಡೆಯಿತು.

ಬೆಳಿಗ್ಗೆ ಜಮಾಯಿಸಿದ್ದ ಯುವಕರು ಯುಎಂಎಲ್ ನಾಯಕರ ಆಗಮನ ವಿರೋಧಿಸಿ ಘೋಷಣೆ ಕೂಗುತ್ತಿದ್ದರೆ, ರ‍್ಯಾಲಿ ಆರಂಭಾವಾದಾಗ ಎರಡೂ ಗುಂಪಿನವರು ಘರ್ಷಣೆಗೆ ಇಳಿದರು. ಕಲ್ಲು ತೂರಾಟ ನಡೆಸಿದರು ಇದರಿಂದಾಗಿ ಹಲವು ಮಂದಿ ಗಾಯಗೊಂಡರು. ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದಂತೆ ಪೊಲೀಸರು ಲಾಠಿಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗಿಸಿ ನಿಯಂತ್ರಣಕ್ಕೆ ತರಬೇಕಾಯಿತು. ಕೊನೆಗೆ ಸ್ಥಳೀಯ ಆಡಳಿತ ಕರ್ಫ್ಯೂ ಜಾರಿಗೊಳಿಸುವಂತಾಯಿತು. ಗಲಭೆಯ ಅರ್ಭಟದಿಂದ ಸಿಮ್ರಾ ವಿಮಾನ ನಿಲ್ದಾಣದ ಗೇಟ್ ಹಾನಿಗೊಳಗಾಗಿ ವಿಮಾನ ಸಂಚಾರವೂ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು.

ಸ್ಥಳೀಯ ಆಡಳಿತ ಮಧ್ಯಾಹ್ನದಿಂದ ರಾತ್ರಿ 8 ಗಂಟೆಯವರೆಗೆ ಕರ್ಫ್ಯೂ ಜಾರಿಗೊಳಿಸಿದ್ದರೂ, Gen- Z ಯುವಕರು ಟೈರ್‌ಗಳನ್ನು ಸುಟ್ಟು ಪ್ರತಿಭಟನೆ ಮುಂದುವರಿಸಿದರು. ಪೊಲೀಸರು ಯುಎಂಎಲ್ ಪರವಾಗಿ ವರ್ತಿಸಿದ್ದಾರೆ ಎಂಬ ಆರೋಪ ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಯಿತು.

error: Content is protected !!