- ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಿಂದ ಗೋವಾ ರಾಜ್ಯಕ್ಕೆ ಚೋರ್ಲಾ ಘಾಟ್ ಮೂಲಕ ತೆರಳುವ ಭಾರಿ ವಾಹನಗಳಿಗೆ ಗೋವಾ ಸರ್ಕಾರ ನಿಷೇಧ ಹೇರಿದೆ.
ಉತ್ತರ ಗೋವಾ ಟ್ರಾಫಿಕ್ ಎಸ್ಪಿ ಮನವಿ ಮೇರೆಗೆ ಉತ್ತರ ಗೋವಾದ ಡಿಸಿ ಮಮು ಹಗೆ ಆದೇಶವನ್ನು ಹೊರಡಿಸಿದ್ದಾರೆ.”
ಸೆಪ್ಟೆಂಬರ್ 21ರಂದು ಅಧಿಸೂಚನೆ ಹೊರಡಿಸಿರುವ ಗೋವಾ ಉತ್ತರ ಜಿಲ್ಲಾಧಿಕಾರಿ, ಚೋರ್ಲಾ ಘಾಟ್ ಮೂಲಕ ಗೋವಾ ಪ್ರವೇಶಿಸಲು ಭಾರೀ ಲಾರಿಗಳಿಗೆ 2023ರ ಮಾರ್ಚ್ 19ರವರೆಗೆ ಸಂಚಾರ ನಿಷೇಧಿಸಿದ್ದಾರೆ.
ಗೋವಾಗೆ ಸಂಪರ್ಕ ಕಲ್ಪಿಸುವ ರಾಮನಗರ ಗೋವಾ ರಸ್ತೆ ಕಳೆದ ಮೂರು ವರ್ಷಗಳಿಂದ ಬಂದ್ ಆಗಿದೆ. ಹೀಗಾಗಿ ಗೋವಾ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಚೋರ್ಲಾ ಘಾಟ್ ಮೂಲಕ ಟ್ರಾನ್ಸಪೋರ್ಟ್ ವಾಹನಗಳು ತೆರಳುತ್ತವೆ. ಇದರಿಂದ ಕೇರಿ-ಬೆಳಗಾವಿ ರಾಜ್ಯ ಹೆದ್ದಾರಿ 01ರಲ್ಲಿ ಭಾರಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಪರಿಣಾಮ, ಉತ್ತರ ಗೋವಾ ಟ್ರಾಫಿಕ್ ಎಸ್ಪಿ ಮನವಿ ಮೇರೆಗೆ ಉತ್ತರ ಗೋವಾದ ಡಿಸಿ ಮಮು ಹಗೆ ಸಂಚಾರ ನಿರ್ಬಂಧಿಸಿದ್ದಾರೆ.
ಇದರಿಂದ ನಿನ್ನೆ ರಾತ್ರಿಯಿಂದ ಲಾರಿಗಳ ಬಾಕಿಯಾಗಿದ್ದು,ಸಾಲು ಸಾಲು ನಿಂತಿವೆ.