ಹೊಸದಿಗಂತ ಡಿಜಿಟಲ್ ಡೆಸ್ಕ್:
ದಸರಾ ಮಹೋತ್ಸವದ ಹಿನ್ನೆಲೆ ಮೈಸೂರಿನಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಸುನೀಲ್ ಕುಮಾರ್ ಚಾಲನೆ ನೀಡಿದರು.
ಮೈಸೂರಿನ ಕೆ.ಆರ್ ಆಸ್ಪತ್ರೆಯ ಬಳಿ ಇರುವ ವೃತ್ತದಲ್ಲಿ ರಿಮೋಟ್ ಬಟನ್ ಒತ್ತುವುದರ ಮೂಲಕ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಸುನೀಲ್ ಕುಮಾರ್ ಅಧಿಕೃತ ಚಾಲನೆ ನೀಡಿದರು
ಮೈಸೂರಿನ 126 ಕಿಲೋ ಮೀಟರ್ವರೆಗೂ ದೀಪಾಲಂಕಾರ ಮಾಡಿದ್ದು, 26 ವೃತ್ತದಲ್ಲಿ ವೈರೆಟಿ ಲೈಟಿಂಗ್ಸ್ ಅಳವಡಿಕೆ ಮಾಡಲಾಗಿದೆ.ಮೈಸೂರು ವೀಕ್ಷಣೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಇಂದಿನಿಂದ ವಿಶ್ವವಿಖ್ಯಾತ ಮೈಸೂರು ದಸರಾ-2022ರ ಮಹೋತ್ಸವ ಸಂಭ್ರಮ ಆರಂಭಗೊಂಡಿದೆ. ಮೈಸೂರು ದಸರಾ ವೀಕ್ಷಣೆಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ತೆರಳುವಂತ ಪ್ರವಾಸಿಗರಿಗಾಗಿ, ಕೆ ಎಸ್ ಆರ್ ಟಿ ಸಿಯಿಂದ 2000ಕ್ಕೂ ಹೆಚ್ಚು ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.