Friday, November 21, 2025

ಭಾರತ -ಇಸ್ರೇಲ್ ಮುಕ್ತ ವ್ಯಾಪಾರ ಒಪ್ಪಂದ: ಎರಡು ದೇಶಗಳಿಂದ ಮಾರ್ಗಸೂಚಿಗೆ ಸಹಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಇಸ್ರೇಲ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಶುರುವಾಗಲಿದೆ. ಈ ನಿಟ್ಟಿನಲ್ಲಿ ಎರಡೂ ದೇಶಗಳು ಟರ್ಮ್ಸ್ ಆಫ್ ರೆಫರೆನ್ಸ್ ಅಥವಾ ಮಾರ್ಗಸೂಚಿಗೆ ಸಹಿ ಹಾಕಿವೆ.

ಮಾರುಕಟ್ಟೆ ಪ್ರವೇಶ, ಮುಕ್ತ ವ್ಯಾಪಾರಕ್ಕೆ ಅನುವು ಮಾಡಿಕೊಡುವ ಸಂಗತಿಗಳಿವೆ. ಟ್ಯಾರಿಫ್​ಗಳ ನಿರ್ಬಂಧ ನಿರ್ಮೂಲನಗೊಳಿಸುವುದು, ಟ್ಯಾರಿಫೇತರ ನಿರ್ಬಂಧಗಳನ್ನು ಕಡಿಮೆಗೊಳಿಸುವುದು ಇತ್ಯಾದಿ ಅಂಶಗಳು ಪ್ರಸ್ತಾಪಿತ ಒಪ್ಪಂದದಲ್ಲಿ ಒಳಗೊಂಡಿದೆ.

ಇಸ್ರೇಲ್​ನಲ್ಲಿ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಹಾಗೂ 60ಕ್ಕೂ ಅಧಿಕ ಉದ್ಯಮಿಗಳಿರುವ ಭಾರತೀಯ ನಿಯೋಗವೊಂದು ಇದ್ದು, ಮುಕ್ತ ವ್ಯಾಪಾರ ಒಪ್ಪಂದ ಯಾವ ರೀತಿ ಇರಬೇಕು, ಆ ಸಂಬಂಧ ಮಾತುಕತೆಗಳ ದಿಕ್ಕು ಯಾವ ಕಡೆ ಇರಬೇಕು ಎಂಬಿತ್ಯಾದಿ ಅಂಶಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ಎರಡೂ ದೇಶಗಳ ತಜ್ಞರು ಅಂತಿಮಗೊಳಿಸಿದ್ದಾರೆ.

ಹೂಡಿಕೆ, ಸುಂಕ ವಿಧಾನಗಳ ಸರಳೀಕರಣ, ತಂತ್ರಜ್ಞಾನ ವರ್ಗಾವಣೆ, ರಕ್ಷಣಾ ಕ್ಷೇತ್ರ, ಬಾಹ್ಯಾಕಾಶ ಕ್ಷೇತ್ರ, ಫಿನ್​ಟೆಕ್, ಆಗ್ರಿಟೆಕ್, ಎಐ, ಸೈಬರ್ ಸೆಕ್ಯೂರಿಟಿ, ಆರ್ ಅಂಡ್ ಡಿ, ಇನ್ನೋವೇಶನ್, ಡ್ರಿಪ್ ಇರಿಗೇಶನ್ ಇತ್ಯಾದಿ ವಿಚಾರಗಳ ಬಗ್ಗೆ ಭಾರತೀಯ ನಿಯೋಗ ಮತ್ತು ಇಸ್ರೇಲೀ ತಂಡದ ಮಧ್ಯೆ ಚರ್ಚೆಗಳಾದವು.

ಭಾರತ ಹಾಗೂ ಇಸ್ರೇಲ್ ಮಧ್ಯೆ ಎಫ್​​ಟಿಎ ಏರ್ಪಟ್ಟರೆ ಭಾರತದಿಂದ ವೃತ್ತಿಪರ ಕೆಲಸಗಾರರಿಗೆ ಇಸ್ರೇಲ್​ನಲ್ಲಿ ಕೆಲಸ ಮಾಡಲು ಅವಕಾಶ ಸಿಗಲಿದೆ. ಇಸ್ರೇಲ್ ರಾಜಧಾನಿ ಟೆಲ್ ಅವಿವ್​ನಲ್ಲಿ ನಡೆಯುವ 4.5 ಲಕ್ಷ ಕೋಟಿ ರೂ ಮೊತ್ತದ ಮೆಟ್ರೋ ಪ್ರಾಜೆಕ್ಟ್​ನಲ್ಲಿ ಕೆಲಸ ಮಾಡಲು ಭಾರತದ 8-10 ಕಂಪನಿಗಳನ್ನು ಶಾರ್ಟ್​ಲಿಸ್ಟ್ ಮಾಡಲಾಗಿದೆ ಎಂದು ಸಚಿವ ಪೀಯೂಶ್ ಗೋಯಲ್ ತಿಳಿಸಿದ್ದಾರೆ.

error: Content is protected !!