October 16, 2026
Friday, October 16, 2026
spot_img

ಕೆಮಿಕಲ್ಸ್‌ ತುಂಬಿದ ಭೀಕರ ಮಳೆಯಿಂದ ತತ್ತರಿಸಿದ ಲೆಬನಾನ್‌, 400 ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದಕ್ಷಿಣ ಲೆಬನಾನ್‌ನ ಯೋಹ್ಮೋರ್‌ ಗ್ರಾಮದ ಮೇಲೆ ಇಸ್ರೇಲ್‌ ಭೀಕರ ರಾಸಾಯನಿಕ ದಾಳಿ ಮಾಡಿದ್ದು, ಇಡೀ ಗ್ರಾಮ ಸ್ಮಶಾನದಂತಾಗಿದೆ.

ಇಸ್ರೇಲ್ ಸೇನೆಯು ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಬೆಂಕಿಯ ಉಂಡೆಗಳನ್ನೇ ಸುರಿಸಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿತ ‘ವೈಟ್ ಫಾಸ್ಫರಸ್’ ಬಳಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ದಾಳಿಗೆ ಕೇವಲ ಒಂದು ವಾರದಲ್ಲಿ ಸುಮಾರು 400 ಮಂದಿ ಬಲಿಯಾಗಿದ್ದಾರೆ.

ವೈಟ್ ಫಾಸ್ಫರಸ್ ಕೇವಲ ಸ್ಫೋಟಕವಲ್ಲ, ಅದೊಂದು ಅತ್ಯಂತ ಅಪಾಯಕಾರಿ ರಾಸಾಯನಿಕ ಪದಾರ್ಥ. ಮೇಣದಂತೆ ಕಾಣುವ ಈ ವಸ್ತು ಗಾಳಿಯ ಸಂಪರ್ಕಕ್ಕೆ ಬಂದ ತಕ್ಷಣ ಆಮ್ಲಜನಕದೊಂದಿಗೆ ಬೆರೆತು ಸ್ವಯಂಚಾಲಿತವಾಗಿ ಉರಿಯಲು ಪ್ರಾರಂಭಿಸುತ್ತದೆ. ಇದರ ತೀವ್ರತೆ ಎಷ್ಟಿರುತ್ತದೆ ಎಂದರೆ‌, ಇದು ಉರಿಯುವಾಗ ಸುಮಾರು 815 ಡಿಗ್ರಿ ಸೆಲ್ಸಿಯಸ್ ಶಾಖವನ್ನು ಹೊರಹಾಕುತ್ತದೆ. ಸಾಮಾನ್ಯ ಮಾನವ ದೇಹ 50-60 ಡಿಗ್ರಿ ಶಾಖವನ್ನೇ ತಡೆಯಲಾರದು, ಅಂತಹದರಲ್ಲಿ ಈ ತಾಪಮಾನವು ಜೀವಂತ ದಹನಕ್ಕೆ ಸಮಾನವಾಗಿದೆ.

Must Read