ಇಂದಿನ ವೇಗದ ಜೀವನದಲ್ಲಿ ಪ್ರತಿದಿನ ಮಾರುಕಟ್ಟೆಗೆ ಹೋಗಿ ತರಕಾರಿ ಖರೀದಿಸುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಫ್ರಿಜ್‌ನಲ್ಲಿ ತರಕಾರಿ ಸಂಗ್ರಹಿಸುವುದು ಹೆಚ್ಚು ಉತ್ತಮ ಎಂದುಕೊಳ್ಳುತ್ತಾರೆ. ಆದರೆ ತರಕಾರಿಗಳನ್ನು ಹೇಗೆ ಇಡ್ತೀರಿ ಎನ್ನುವುದೇ ಅವು ಎಷ್ಟು ದಿನ ಫ್ರೆಶ್ ಆಗಿರೋದು ನಿರ್ಧರಿಸುತ್ತದೆ.
- ಟೊಮೆಟೊ: ಹಸಿ ಟೊಮೆಟೊಗಳನ್ನು ಫ್ರಿಜ್‌ನಲ್ಲಿ ಇಡಬೇಡಿ. ಸಾಫ್ಟ್ ಆದ ಟೊಮೆಟೊಗಳನ್ನು ಮಾತ್ರ ತೊಳೆದು ಒಣಗಿಸಿ ಗಾಳಿಯಾಡದ ಡಬ್ಬಿಯಲ್ಲಿ ಇಡಿ.
- ಹಸಿರು ಎಲೆ ತರಕಾರಿಗಳು (ಪಾಲಕ್, ಕೊತ್ತಂಬರಿ, ಮೆಂತ್ಯ): ಇವುಗಳಲ್ಲಿ ತೇವಾಂಶ ಜಾಸ್ತಿ ಇರುವುದರಿಂದ ಬೇಗನೆ ಹಾಳಾಗುತ್ತವೆ. ಮೊದಲು ಚೆನ್ನಾಗಿ ತೊಳೆದು ಬಟ್ಟೆಯ ಮೇಲೆ ಹರಡಿ ಒಣಗಿಸಿ. ಸಂಪೂರ್ಣ ಒಣಗಿದ ನಂತರ ಟಿಶ್ಯೂ/ಪೇಪರ್‌ನಲ್ಲಿ ಸುತ್ತಿ ಜಿಪ್‌ಲಾಕ್ ಬ್ಯಾಗ್‌ನಲ್ಲಿ ಇಟ್ಟರೆ ಹೆಚ್ಚು ದಿನ ಫ್ರೆಶ್ ಇರುತ್ತವೆ.
- ಸೌತೆಕಾಯಿ, ಕ್ಯಾರೆಟ್, ಬೆಲ್ ಪೆಪ್ಪರ್, ಬೀನ್ಸ್: ಈ ತರಕಾರಿಗಳನ್ನು ತೊಳೆದು ಸಂಪೂರ್ಣ ಒಣಗಿಸಿ ಪ್ಲಾಸ್ಟಿಕ್ ಪೌಚ್ ಅಥವಾ ಏರ್‌ಟೈಟ್ ಬಾಕ್ಸ್‌ನಲ್ಲಿ ಇಟ್ಟರೆ 6–7 ದಿನ ತಾಜಾವಾಗಿರುತ್ತದೆ.
- ಶುಂಠಿ: ಶುಂಠಿಯನ್ನು ಯಾವಾಗಲೂ ಏರ್‌ಟೈಟ್ ಡಬ್ಬಿನಲ್ಲಿ ಇಟ್ಟರೆ ಬೇಗನೆ ಒಣಗದೆ ಹೆಚ್ಚು ಕಾಲ ಫ್ರೆಶ್ ಇರುತ್ತದೆ.
- ಎಲೆಕೋಸು, ಹೂಕೋಸು, ಬ್ರೊಕೊಲಿ: ತೊಳೆದು ಒಣಗಿಸಿದ ನಂತರ ಗುಣಮಟ್ಟದ ಬ್ಯಾಗ್ ಅಥವಾ ಕಂಟೇನರ್‌ನಲ್ಲಿ ಇಡುವುದು ಸೂಕ್ತ.
- ನಿಂಬೆ ಮತ್ತು ಹಸಿರು ಮೆಣಸಿನಕಾಯಿ: ನಿಂಬೆಹಣ್ಣುಗಳನ್ನು ಗಾಳಿಯಾಡದ ಡಬ್ಬಿಯಲ್ಲಿ ಇಟ್ಟರೆ ತೇವಾಂಶ ಉಳಿದು ಹೆಚ್ಚು ದಿನ ತಾಜಾ ಇರುತ್ತವೆ. ಹಸಿಮೆಣಸಿನಕಾಯಿಯನ್ನು ಒಣಗಿಸಿ ಟಿಶ್ಯೂನಲ್ಲಿ ಸುತ್ತಿ ಇಡಿ.

