Sunday, November 23, 2025

ಸಪ್ತಪದಿ ತುಳಿಯೋಕೆ ರೆಡಿ ಆದ್ರು ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌: ವೈರಲ್ ಆಗ್ತಿದೆ ಎಂಗೇಜ್‌ಮೆಂಟ್‌ ಫೋಟೋ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಹಾಗೂ ವಿಶ್ವಕಪ್ ವಿಜೇತೆ ಸ್ಮೃತಿ ಮಂಧಾನ ತಮ್ಮ ನಿಶ್ಚಿತಾರ್ಥವನ್ನು ಅತ್ಯಂತ ಕ್ರಿಯೇಟಿವ್ ರೀತಿಯಲ್ಲಿ ಜಗತ್ತಿಗೆ ತಿಳಿಸಿದ್ದಾರೆ. ತಮ್ಮ ತಂಡದ ಆಟಗಾರ್ತಿಯರ ಜೊತೆ ಕುಣಿದ ರೀಲ್ ಮೂಲಕ ಈ ವಿಶೇಷ ಕ್ಷಣವನ್ನು ಹಂಚಿಕೊಂಡಿರುವುದು ಅಭಿಮಾನಿಗಳನ್ನು ಆಶ್ಚರ್ಯಚಕಿತರನ್ನಾಗಿಸಿದ್ದಾರೆ.

ಗಾಯಕ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚಾಲ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಮಂಧಾನ, ರೀಲ್‌ನ ಕೊನೆಯ ಫ್ರೇಮ್‌ನಲ್ಲಿ ತನ್ನ ಬೆರಳಿನ ಉಂಗುರವನ್ನು ತೋರಿಸಿ ದೀರ್ಘಕಾಲದಿಂದ ಹರಿದಾಡುತ್ತಿದ್ದ ಸುದ್ದಿಗಳಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ.

ಜೆಮಿಮಾ ರೋಡ್ರಿಗಸ್, ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್ ಹಾಗೂ ಅರುಂಧತಿ ರೆಡ್ಡಿ ಜೊತೆ ಇದ್ದ ಮಂಧಾನ, ‘ಲಗೋ ರಹೋ ಮುನ್ನಾಭಾಯಿ’ ಚಿತ್ರದ ‘ಸಮ್ಜೋ ಹೋ ಹೀ ಗಯಾ’ ಹಾಡಿಗೆ ತಕ್ಕಂತೆ ಪರ್ಫೆಕ್ಟ್ ಕೊರಿಯೋಗ್ರಾಫ್ ಮಾಡಿದ ವೀಡಿಯೋವನ್ನು ಹಂಚಿಕೊಂಡಿದ್ದು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

error: Content is protected !!