September 27, 2026
Sunday, September 27, 2026
spot_img

ಕ್ರಿಕೆಟ್​​ ಮೇಲೂ ತಟ್ಟಿದ ಯುದ್ಧದ ಕಾರ್ಮೋಡ: ಭಾರತದಲ್ಲೇ ಉಳಿದ ಈ ಎರಡು ಟೀಮ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ನಿಂದ ಹೊರಬಿದ್ದ ವೆಸ್ಟ್ ಇಂಡೀಸ್ ತಂಡವು ತವರಿಗೆ ತೆರಳಬೇಕಿತ್ತು. ಆದಾಗ್ಯೂ, ಯುಎಸ್ಎ-ಇಸ್ರೇಲ್ ಮತ್ತು ಇರಾನ್ ಯುದ್ಧ ಗಳಿಂದಾಗಿ ಆಟಗಾರರ ಪ್ರಯಾಣ ಮತ್ತಷ್ಟು ವಿಳಂಬವಾಗಲಿದೆ.

ಪಶ್ಚಿಮ ಏಷ್ಯಾದ ದೇಶಗಳಲ್ಲಿನ ಉದ್ವಿಗ್ನತೆಯಿಂದಾಗಿ, ವಿಮಾನ ಪ್ರಯಾಣ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದು ಅನೇಕ ಅಂತಾರಾಷ್ಟ್ರೀಯ ವಿಮಾನಗಳ ಮೇಲೆ ಪರಿಣಾಮ ಬೀರಿದೆ. ಆಟಗಾರರ ಸುರಕ್ಷತೆ ಅವರಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮ್ಯಾನೇಜ್ಮೆಂಟ್ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನು ಜಿಂಬಾಬ್ವೆ ಆಟಗಾರರರು ಕೂಡ ಬಾಕಿಯಾಗಿದ್ದು, ನಮ್ಮ ಕ್ರಿಕೆಟ್ ತಂಡ ದುಬೈ ಮೂಲಕ ಮನೆಗೆ ಮರಳಬೇಕಿತ್ತು. ಆದಾಗ್ಯೂ, ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ಉದ್ವಿಗ್ನತೆಯಿಂದಾಗಿ, ನಮ್ಮ ತಂಡದ ಆಟಗಾರರ ಪ್ರಯಾಣ ಯೋಜನೆಗಳ ಮೇಲೆ ಪರಿಣಾಮ ಬೀರಿದೆ ಎಂದು ಜಿಂಬಾಬ್ವೆ ಕ್ರಿಕೆಟ್ ಮ್ಯಾನೇಜ್ಮೆಂಟ್ ಹೇಳಿಕೆ ನೀಡಿದೆ.

ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ತಂಡಗಳು ಪಶ್ಚಿಮ ಏಷ್ಯಾದ ದುಬೈ ಮೂಲಕ ತಮ್ಮ ದೇಶಗಳನ್ನು ತಲುಪಬೇಕಾಗುತ್ತದೆ. ಆದಾಗ್ಯೂ, ಇರಾನಿನ ಪ್ರತೀಕಾರದ ದಾಳಿಯಿಂದಾಗಿ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಹಾನಿಗೊಳಗಾಗಿದೆ ಎಂದು ತಿಳಿದಿದೆ. ಈ ಪ್ರಕ್ರಿಯೆಯಲ್ಲಿ ನೂರಾರು ವಿಮಾನಗಳನ್ನು ರದ್ದುಗೊಳಿಸಲಾಯಿತು.

Must Read