Saturday, November 22, 2025

ಬಾಂಗ್ಲಾದೇಶದಲ್ಲಿ ನಡುಗಿದ ಭೂಮಿ: 5.7 ತೀವ್ರತೆಯ ಭೂಕಂಪ, ಭಯದಲ್ಲಿ ದಿಕ್ಕಾಪಾಲಾಗಿ ಓಡಿದ ಜನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶುಕ್ರವಾರ ಢಾಕಾ ಮತ್ತು ಬಾಂಗ್ಲಾದೇಶದ ಇತರ ಭಾಗಗಳಲ್ಲಿ 5.7 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ.

ಭೂಕಂಪದ ಅನುಭವದಿಂದ ಭಯಭೀತರಾದ ನಿವಾಸಿಗಳು ತಮ್ಮ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಹಾನಿ ಅಥವಾ ಸಾವುನೋವು ಸಂಭವಿಸಿದ ವರದಿಗಳು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಸಮಯ ಬೆಳಿಗ್ಗೆ 10:30 ಕ್ಕೆ ಸಂಭವಿಸಿದ ಭೂಕಂಪದ ಕೇಂದ್ರಬಿಂದು ಢಾಕಾದ ಈಶಾನ್ಯ ಹೊರವಲಯದಲ್ಲಿರುವ ನರಸಿಂಗ್ಡಿ ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ. ಇದು 10 ಕಿ.ಮೀ ಆಳದಲ್ಲಿತ್ತು ಎನ್ನಲಾಗಿದೆ.

error: Content is protected !!