April 15, 2026
Wednesday, April 15, 2026
spot_img

MARKETING | ಪರ್ಫೆಕ್ಟ್‌ ಟೈಮ್‌ಗೆ ಜಾಹೀರಾತು ಲಾಂಚ್‌ ಮಾಡಿದ್ದ ಬ್ರ್ಯಾಂಡ್‌, ರಶ್ಮಿಕಾ-ವಿಜಯ್‌ ADVTಗೆ 300 ಮಿಲಿಯನ್ ವ್ಯೂಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬ್ರ್ಯಾಂಡ್‌ ಫೇಮಸ್‌ ಆಗೋಕೆ, ಫೇಮಸ್‌ ಆಗಿರುವ ಬ್ರ್ಯಾಂಡ್‌ ತನ್ನ ಬೆಲೆ ಹೆಚ್ಚಿಸಿಕೊಳ್ಳೋಕೆ ಮಾರ್ಕೆಟಿಂಗ್‌ ತುಂಬಾನೇ ಮುಖ್ಯ. ಯಾವ ಸಮಯದಲ್ಲಿ ಯಾವ ಪ್ರಾಡಕ್ಟ್‌ ಹೇಗೆ ಲಾಂಚ್‌ ಆಗ್ಬೇಕು ಅನ್ನೋದನ್ನು ಮಾರ್ಕೆಟಿಂಗ್‌ ಟೀಂ ನಿರ್ಧರಿಸುತ್ತದೆ. ಅತಿಹೆಚ್ಚು ಜನರಿಗೆ ತಮ್ಮ ಪ್ರಾಡಕ್ಟ್‌ ರೀಚ್‌ ಆಗೋ ಹಾಗೇ ಮಾಡುತ್ತದೆ.

ಮಾನ್ಯವರ್‌ ಕೂಡ ಒಳ್ಳೆಯ ಮಾರ್ಕೆಟಿಂಗ್‌ ಮಾಡಿ ತಮ್ಮ ವೆಡ್ಡಿಂಗ್‌ ಕಲೆಕ್ಷನ್‌ ಫೇಮಸ್‌ ಮಾಡಿಕೊಂಡಿದೆ. ಬಾಲಿವುಡ್‌ನಲ್ಲಿ ಯಾವುದೇ ಕಪಲ್‌ ಮದುವೆಯ ಸುದ್ದಿ ಹರಿದಾಡುತ್ತಿದ್ದಂತೆಯೇ ಮಾನ್ಯವರ್‌ ಆ ಹೀರೋ-ಹೀರೋಯಿನ್‌ ಜತೆ ಡೇಟ್‌ ಬುಕ್‌ ಮಾಡಿಕೊಳ್ಳುತ್ತದೆ. ಇದೇ ಸಾಲಿಗೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಕೂಡ ಸೇರಿದ್ದಾರೆ.

ರಶ್ಮಿಕಾ ಹಾಗೂ ವಿಜಯ್‌ ಮದುವೆಯ ಕೆಲ ಸಮಯದ ನಂತರವೇ ಮಾನ್ಯವರ್‌ ಜಾಹೀರಾತನ್ನು ರಿಲೀಸ್‌ ಮಾಡಿದೆ. ಈ ಜಾಹೀರಾತಿಗೆ 300 ಮಿಲಿಯನ್ ವ್ಯೂಸ್ ಸಿಕ್ಕಿದೆ. ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಮಾನ್ಯವರ್ ಜಾಹೀರಾತಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಕೆಲವೇ ದಿನಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ. ಈ ಪೋಸ್ಟ್ ಇನ್​​ಸ್ಟಾಗ್ರಾಮ್ ಅಲ್ಲಿ 72 ಗಂಟೆಗಳಲ್ಲಿ 100 ಮಿಲಿಯನ್​ ವೀವ್ಸ್ ದಾಟಿದೆ. ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ, ಈ ಅಭಿಯಾನವು ಈಗ 300 ಮಿಲಿಯನ್ ವೀವ್ಸ್ ಪಡೆದಿದೆ. ಅಲ್ಲದೆ, 250 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ತಲುಪಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !